
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ನಿರಾಶ್ರೀತರಿಗೆ ಬೆಳಗಾವಿ ಜಿಲ್ಲೆಯಲ್ಲಿ ಇನ್ನೂ ಸಮರ್ಪಕ ಪರಿಹಾರ ನೀಡುವ ಕಾರ್ಯ ನಡೆದಿಲ್ಲ. ಅಧಿಕಾರಿಗಳ ತಪ್ಪಿನಿಂದಾಗಿ ಸಂತ್ರಸ್ತರಿಗೆ ಇನ್ನೂ ಬಿದ್ದಿರುವ ಮನೆಗಳ ಪರಿಹಾರ ಸಕ್ಕಿಲ್ಲ. ಈ ಬಗ್ಗೆ ವರದಿ ತರಿಸಿ ಸರ್ವೆಯಾಗಿರುವ ಮನೆಗಳ ಪರಿಹಾರವನ್ನು ಒದಗಿಸುವಂತೆ ಶಾಸಕ ಅಭಯ ಪಾಟೀಲ್ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅಭಯ ಪಾಟೀಲ್, ಅತೀವೃಷ್ಟಿಯಿಂದ ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬಿದ್ದಿರುವ ಮನೆಗಳಿಗೆ ಪರಿಹಾರ ನೀಡುವ ಕುರಿತು ಸರಕಾರವನ್ನು ಒತ್ತಾಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ