Latest

ತೃಪ್ತಿ ದೇಸಾಯಿ ಬಂಧನ

ಪ್ರಗತಿವಾಹಿನಿ ಸುದ್ದಿ; ಪುಣೆ: ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಸೇರಿದಂತೆ ಭೂ ಮಾತಾ ಬ್ರಿಗೇಡ್ ನ ಹಲವು ಸದಸ್ಯರನ್ನು ಪೊಲೀಸರು ಬಂಧಿಸಿರುವ ಘಟನೆ ಅಹ್ಮದ್ ನಗರದಲ್ಲಿ ನಡೆದಿದೆ.

ಶಿರಡಿಯಲ್ಲಿ ಭಕ್ತರು ಸುಸಂಸ್ಕೃತ ರೀತಿಯಲ್ಲಿ ವಸ್ತ್ರ ಧರಿಸಬೇಕು ಎಂಬ ಒಕ್ಕಣೆಯ ಫಲಕವನ್ನು ತೆರವುಗೊಳಿಸಲು ಹೊರಟಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.

ಉಪ ವಿಭಾಗೀಯ ಮೆಜಿಸ್ಟ್ರೇಟ್ ಶಿರಡಿ ಪಟ್ಟಣ ಪ್ರವೇಶಿಸದಂತೆ ತೃಪ್ತಿ ದೇಸಾಯಿಗೆ ನೋಟೀಸ್ ನೀಡಿತ್ತು. ಆದರೂ ಶಿರಡಿ ಪಟ್ಟಣಕ್ಕೆ ಹೊರಟಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

Related Articles

Back to top button