Latest
ಮದ್ಯದ ಅಮಲಲ್ಲಿ ಔಷಧವೆಂದು ಬ್ರೇಕ್ ಆಯಿಲ್ ಸೇವಿಸಿದ ಇಂಜಿನಿಯರ್

ಪ್ರಗತಿವಾಹಿನಿ ಸುದ್ದಿ; ಶಿರಸಿ: ಔಷಧವೆಂದು ಬ್ರೇಕ್ ಆಯಿಲ್ ಸೇವಿಸಿ ಹೆಸ್ಕಾಮ್ ಇಂಜಿನಿಯರ್ ಮೃತಪಟ್ಟಿರುವ ಘಟನೆ ಶಿರಸಿಯ ಕೆಇಬಿ ವಸತಿ ನಿಲಯದಲ್ಲಿ ನಡೆದಿದೆ.
ಮೃತರನ್ನು ಕೆಇಬಿ ಕಿರಿಯ ಇಂಜಿನಿಯರ್ ಸುರೇಶ ಗುತ್ಯಪ್ಪ ಅರಳೇಶ್ವರ (51) ಎಂದು ಗುರುತಿಸಲಾಗಿದೆ. ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡಿದ್ದ ಸುರೇಶ, ಬಿಪಿ, ಮಧುಮೇಹದಿಂದ ಬಳಲುತ್ತಿದ್ದರು. ಎರಡನೇ ಮಗ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ. ಇದರಿಂದ ತುಂಬಾ ಮನನೊಂದಿದ್ದ ಸುರೇಶ ವಿಪರೀತ ಕುಡಿತಕ್ಕೆ ದಾಸರಾಗಿದ್ದರು.
ಮದ್ಯದ ಅಮಲಿನಲ್ಲಿ ಉಟ ಮಾಡಿ, ಬಳಿಕ ಔಷಧವೆಂದು ಭಾವಿಸಿ ಬ್ರೇಕ್ ಆಯಿಲ್ ಸೇವಿಸಿ ಮೃತಪಟ್ಟಿದ್ದಾರೆ. ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




