Kannada NewsLatest

ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಖಾನಾಪುರ ತಾಲ್ಲೂಕಿನ ಗಣೆಬೈಲ ಗ್ರಾಮದ ಬಳಿ ಗುರುವಾರ ಸಂಜೆ ಸ್ಕಾರ್ಪಿಯೋ ಪ್ರಯಾಣಿಕರ ಕಾರು ಮತ್ತು ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಬೆಳಗಾವಿಯಿಂದ ಖಾನಾಪುರ ಕಡೆ ಹೊರಟಿದ್ದ ಬಸ್ ಮತ್ತು ಖಾನಾಪುರದಿಂದ ಬೆಳಗಾವಿ ಕಡೆ ಹೊರಟಿದ್ದ ಸ್ಕಾರ್ಪಿಯೋ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಕಾರ್ಪಿಯೋ ಚಾಲಕ ಮಹಾರಾಷ್ಟ್ರದ ಕಾಳಮ್ಮವಾಡಿ ನಿವಾಸಿ ನಿವಾಸ್ ಸಾವಂತ (45) ಸಾವನ್ನಪ್ಪಿದರು. ಸ್ಕಾರ್ಪಿಯೋದಲ್ಲಿದ್ದ ಬೆಳಗಾವಿಯ ಮಜಗಾವಿ‌‌ ನಿವಾಸಿ ಪ್ರಕಾಶ ಪಾಟೀಲ ಗಂಭೀರವಾಗಿ ಗಾಯಗೊಂಡ ಕಾರಣ ಬೆಳಗಾವಿಯ ವಿಜಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್ ಚಾಲಕ ಸೇರಿದಂತೆ ಅದರಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button