Kannada NewsLatest

ಬೆಳಗಾವಿ: ಶಾಸಕ ಅನಿಲ ಬೆನಕೆ ಮಾದರಿ ಮಾಡುವುದಾಗಿ ಹೇಳಿದ್ದು ಯಾವ ಗಲ್ಲಿ?

ಬೆಳಗಾವಿ: 5 ಕೋಟಿ ರೂ. ಅನುದಾನದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಉತ್ತರ ಮತಕ್ಷೇತ್ರದ ಅಭಿವೃಧ್ದಿಯ ಹರಿಕಾರರಾದ ಶಾಸಕ ಅನಿಲ ಬೆನಕೆರವರು ಬೆಳಗಾವಿ ನಗರದ ಬಾಂದುರಗಲ್ಲಿ, ತಹಶೀಲ್ದಾರ ಗಲ್ಲಿ ಹಾಗೂ ಮಾತೋಶ್ರಿ ಗಲ್ಲಿಗಳಲ್ಲಿ ರಸ್ತೆ, ಚರಂಡಿ, ಅಂಡರ್‌ಗ್ರೌಂಡ ಕೇಬಲ್ ಅಳವಡಿಕೆ, ಡ್ರೈನೇಜ್ ಹಾಗೂ ಇತರೆ ಅಭಿವೃಧ್ದಿಗೆ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಭೂಮಿ ಪೂಜೆಯನ್ನು ಸಲ್ಲಿಸಿ ಮಾತನಾಡಿದ ಅವರು, ಬಾಂದುರಗಲ್ಲಿಯನ್ನು ಮಾದರಿಗಲ್ಲಿಯಾಗಿ ಪರಿವರ್ತನೆ ಮಾಡಲು ರೂ.1 ಕೋಟಿ 60 ಲಕ್ಷರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಅದರಂತೆಯೆತಹಶೀಲ್ದಾರ ಗಲ್ಲಿಯಲ್ಲಿ ರೂ.2 ಕೋಟಿ 86 ಲಕ್ಷರೂಪಾಯಿ ವೆಚ್ಚದಲ್ಲಿ ಡ್ರೈನೇಜ್ ನಿರ್ಮಾಣ, ಪಾದಚಾರಿರಸ್ತೆ, ಹೊಸ ಯು.ಜಿ.ಡಿ ಲೈನ್ ಹಾಗೂ ವಿದ್ಯತ್ ಅಳವಡಿಕೆ ಕಾಮಗಾರಿಗನ್ನು ಕೈಗೊಳ್ಳಲು ಚಾಲನೆ ನೀಡಲಾಗಿದೆ ಹಾಗೂ ಮಾತೋಶ್ರೀ ಗಲ್ಲಿಯಲ್ಲಿ ರೂ.63.54 ಲಕ್ಷಗಳ ವೆಚ್ಚದಲ್ಲಿಡ್ರೈನೇಜ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಭೂಮಿ ಪೂಜೆಯನ್ನು ಸಲ್ಲಿಸಲಾಗಿದೆಎಂದು ಮಾಹಿತಿ ನೀಡಿದರು.

ಬೆಳಗಾವಿ ನಗರದ ಜನತೆಯ ಸಹಾಯ ಸಹಕಾರದಿಂದ ನಗರದಲ್ಲಿಇದುವರೆಗೂ ಸಾಕಷ್ಟು ಅಭಿವೃಧ್ದಿ ಕೆಲಸಗಳು ಆಗಿದ್ದು, ನಗರದ ಗಲ್ಲಿಗಳನ್ನು ಮಾದರಿ ಗಲ್ಲಿಗಳಾಗಿ ಅಭಿವೃದ್ದಿಪಡಿಸುವ ಕನಸು ನಮ್ಮದಾಗಿರುವುದರಿಂದ ಸದ್ಯ ಬಾಂದುರಗಲ್ಲಿಯನ್ನು ಮಾದರಿಗಲ್ಲಿಯಾಗಿ ಮಾಡಲು ಕ್ರಮ ಕೈಗೊಂಡು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ಹಂತದಲ್ಲಿ ನಗರದಲ್ಲಿಇರುವ ಇತರೆ ಗಲ್ಲಿಗಳನ್ನು ಮಾದರಿ ಗಲ್ಲಿಗಳಾಗಿ ಅಭಿವೃಧ್ದಿ ಪಡಿಸುತ್ತೇವೆ. ಈಗ ಚಾಲನೆ ನೀಡಿರುವ ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಲ್‌ಆಂಡ್ ಟಿ ಕಂಪನಿಯ ಅಧಿಕಾರಿಗಳು, ಕೆ.ಇ.ಬಿ ಅಧಿಕಾರಿಗಳು, ಗುತ್ತಿಗೆದಾರರು, ನಗರಸೇವಕಿಯರಾದ ವೈಶಾಲಿ ಸಿದ್ಧಾರ್ಥ ಭಾತಕಾಂಡೆ, ಪೂಜಾ ಇಂದ್ರಜೀತ ಪಾಟೀಲ, ರೇಷ್ಮಾ ಪ್ರವೀಣ ಪಾಟೀಲ, ಶ್ರೇಯಸ್ ನಾಕಾಡಿ, ಸ್ಥಳಿಯರಾದ ಅಜಿತಯಾದವ, ರಾಜು ಮೊದಗೆಕರ, ನಾರಾಯನಖಾಂಡೆಕರ, ಯಶವಂತಜಾಧವ, ಮಹಾದೇವಜಾಧವ, ಮಧುಉಚಗಾಂವಕರ, ಸುರೇಖಾ ಹೋನಗೆಕರ, ಸುಜಾತಾ ಹೋನಗೆಕರ, ಅನಿತಾ ಪವಾರ, ಗಜಾನನಝೀಂಜಿ, ಗುರುನಾಥ ಚೌಗುಲೆ, ಶ್ರೀಧರ ಪಾಟೀಲ ಸೇರಿದಂತೆಇತರರಹವಾಸಿಗಳು, ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ರಸ್ತೆಗಳ ಅಭಿವೃದ್ಧಿಗೆ ಶೀಘ್ರ 50 ಕೋಟಿ ರೂ. ಅನುದಾನ – ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button