Kannada NewsLatest

ಬೆಂಕಿಗೆ ಹಾರಿದ್ದ ರಮೇಶ್ ಜಾರಕಿಹೊಳಿ ಬೆಂಬಲಿಗನ ಸ್ಥಿತಿ ಗಂಭೀರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಮೇಶ್ ಜಾರಕಿಹೊಳಿ ಬೆಂಬಲಿಗರ ಹೋರಾಟ ಬೆಳಗಾವಿಯಲ್ಲಿ ಮುಂದುವರೆದಿದ್ದು, ಈ ನಡುವೆ ಬೆಂಕಿಗೆ ಹಾರಿದ್ದ ರಮೇಶ್ ಜಾರಕಿಹೊಳಿ ಬೆಂಬಲಿಗನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಗಣಪತಿ ರಜಪೂತ (55) ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ರಮೇಶ್ ಬೆಂಬಲಿಗ. ಈತ ಗೋಕಾಕ್ ತಾಲೂಕಿನ ಚಿನವಾರ ಗಲ್ಲಿ ನಿವಾಸಿ.

Home add -Advt

ರಮೇಶ್ ಜಾರಕಿಹೊಳಿ ಯಾವುದೇ ತಪ್ಪು ಮಾಡಿಲ್ಲ. ಸಚಿವ ಸ್ಥಾನ ವಾಪಸ್ ನೀಡಬೇಕು ಎಂದು ಆಗ್ರಹಿಸಿ ರಮೇಶ್ ಬೆಂಬಲಿಗರು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಇಂದು ಗೋಕಾಕ್ ನಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ ವೇಳೆ ಗಣಪತಿ ರಜಪೂತ ಟೈಯರ್ ಗೆ ಹಚ್ಚಿದ್ದ ಬೆಂಕಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ತಕ್ಷಣ ಆತನನ್ನು ಪೊಲೀಸರು ಎಳೆದು ರಕ್ಷಿಸಿದ್ದರು. ಆದರೆ ಆತಮ ತೊಡೆ ಭಾಗದಲ್ಲಿ ಸುಟ್ಟು ಹೋಗಿದ್ದು, ಗಂಭೀರ ಗಾಯಗಳಾಗಿವೆ. ಗೋಕಾಕ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಜಪೂತ ಸ್ಥಿತಿ ಗಂಭೀರವಾಗಿದ್ದು, ಶೇ.30ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

Related Articles

Back to top button