Kannada NewsLatest

9 ತಿಂಗಳ ಮಗುವನ್ನು ಬಿಟ್ಟು ಆತ್ಮಹತ್ಯೆಗೆ ಶರಣಾದ ಬೆಳಗಾವಿ ಮೂಲದ ಪಿಡಿಓ ಪತ್ನಿ; ಪತಿ ಬಂಧನ

ಪ್ರಗತಿವಾಹಿನಿ ಸುದ್ದಿ; ಕೊಳ್ಳೇಗಾಲ:   ಹನೂರು ತಾಲ್ಲೂಕು ಹೂಗ್ಯಂ ಗ್ರಾ.ಪಂ ಪಿಡಿಒ ಆನಂದ್ ಕಾಂಬಳೆ ಪತ್ನಿ ಕೊಳ್ಳೆಗಾಲದ ಬಸ್ತಿಪುರ ಬಡಾವಣೆಯ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೀರ್ಥ ಮೂಲದ ಪಿಡಿಒ  ಆನಂದ್ ಕಳೆದ ಮೂರು ವರ್ಷಗಳ ಹಿಂದೆ ಬಾಗಲಕೋಟೆಯ  ವಿದ್ಯಾಶ್ರೀ (22) ಜೊತೆ ವಿವಾಹವಾಗಿದ್ದರು. ಆನಂದ್ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ದೂರಿದ್ದಾರೆ.

Home add -Advt

ಮದುವೆ ವೇಳೆಯಲ್ಲಿ 40 ಗ್ರಾಂ ಚಿನ್ನ ಕೊಟ್ಟು ಐದು ಲಕ್ಷ ವೆಚ್ಚದಲ್ಲಿ ಅದ್ಧೂರಿಯಾಗಿ ಲಗ್ನ ಮಾಡಿಕೊಡಲಾಗಿತ್ತು. ಆದರೂ ಆಗಾಗ್ಗೆ ಊರಿನಿಂದ ಹಣ ತರುವಂತೆ ನಮ್ಮ ಮಗಳಿಗೆ ಆನಂದ್ ಪಿಡಿಸುತ್ತಿದ್ದ. ಅದಲ್ಲದೇ ದೈಹಿಕವಾಗಿ, ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದ ಎಂದು ಮೃತ ವಿದ್ಯಾಶ್ರೀ ಪೋಷಕರು ಪಟ್ಟಣ ಠಾಣೆಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪತಿ ಕಿರುಕುಳಕ್ಕೆ ಬೇಸತ್ತು 9 ತಿಂಗಳ ಮಗುವನ್ನು ಬಿಟ್ಟು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕಣ್ಣೀರಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಆರೋಪಿ ಆನಂದ್ ನನ್ನು ಬಂಧಿಸಿದ್ದಾರೆ.

ಹಿಜಾಬ್ ತೀರ್ಪು; 4 ಪ್ರಶ್ನೆಗಳಿಗೆ 4 ಉತ್ತರ ; ಹೈಕೋರ್ಟ್ ಪರಿಗಣಿಸಿದ ಮಹತ್ವದ ಅಂಶಗಳು

Related Articles

Back to top button