
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಅಂಚೆಕಚೇರಿಯ ಅಧೀಕ್ಷಕರು ಬೆಳಗಾವಿ ವಿಭಾಗದ ಕಚೇರಿಗೆ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (PLS) ಹಾಗೂ ರೂರಲ್ ಪೋಸ್ಟಲ್ ಲೈಫ್ ಇನ್ಸೂರೆನ್ಸ್ (RPSL) ಸೇವೆಗಳಿಗಾಗಿ ಇನ್ಸೂರೆನ್ಸ್ ಏಜೆಂಟ್ ಗಳನ್ನು ನೇಮಕ ಮಾಡಿಕೊಳ್ಳಲು ನೇರ ಸಂದರ್ಶನವನ್ನು ಜುಲೈ 12 ರಂದು ರೈಲ್ವೆ ನಿಲ್ದಾಣದ ಹತ್ತಿರ ಇರುವ ಅಂಚೆ ಅಧೀಕ್ಷಕರ ಕಚೇರಿ ಬೆಳಗಾವಿ ವಿಭಾಗದಲ್ಲಿ ಮು.11:00 ಗಂಟೆಗೆ ಹಮ್ಮಿಕೊಳ್ಳಲಾಗಿದೆ
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಸ್ವ-ವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಸಂದರ್ಶನಕ್ಕೆ ಹಾಜರಾಗುವಂತ ಅಭ್ಯರ್ಥಿಗಳು ತಮ್ಮ ಬಯೋಡೇಟಾ ಹಾಗೂ ಶೈಕ್ಷಣಿಕ ಸರ್ಟಿಫಿಕೇಟ್ ವಯೋಮಿತಿ ಪ್ರೂಫ್ ಹಾಗೂ ಅಡ್ರೆಸ್ ಪ್ರೂಫ್ , ಪ್ಯಾನ್ ಕಾರ್ಡ್ ಮತ್ತು ಅನುಭವ ವಿದ್ದಲ್ಲಿ ಅನುಭವ ಪತ್ರವನ್ನು ತೆಗೆದುಕೊಂಡು ಬರಬೇಕು.
ಅರ್ಹತೆ ಮತ್ತು ಷರತ್ತುಗಳು:
ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಅಂಗೀಕರಿಸಲ್ಪಟ್ಟ ಯಾವುದೇ ಸಂಸ್ಥೆಯಿಂದ ಹತ್ತನೇ ತರಗತಿಯನ್ನು ತೇರ್ಗಡೆ ಹೊಂದಿರಬೇಕು 18 ರಿಂದ 50 ವರ್ಷದ ವಯೋಮಿತಿಯವರಾಗಿರಬೇಕು, ಯಾವುದೇ ಇನ್ಸೂರೆನ್ಸ್ ಕಂಪನಿಯ ಮಾಜಿ ಲೈಫ್ ಅಡ್ವೈಸರ್, ಮಾಜಿ ಏಜೆಂಟರು, ಅಂಗನವಾಡಿ ಕಾರ್ಯಕರ್ತರು, ಮಹಿಳಾ ಮಂಡಲ ಕಾರ್ಯಕರ್ತರು, SHGS ಎಕ್ಸ್ ಸರ್ವಿಸ್ಮೆನ್, ನಿವೃತ್ತ ಶಿಕ್ಷಕರು, ನಿರುದ್ಯೋಗಿಗಳು ಸ್ವಯಂ ಉದ್ಯೋಗ ಮಾಡುವ ಯುವಕರು ಹಾಗೂ ಇತರೆ ಕನಿಷ್ಠ ಶೈಕ್ಷಣಿಕ ಅರ್ಹತೆ ಹೊಂದಿದವರು ಸಂದರ್ಶನಕ್ಕೆ ಹಾಜರಾಗಬಹುದು.
ಇನ್ಸೂರೆನ್ಸ್ ಕ್ಷೇತ್ರದಲ್ಲಿ ಅನುಭವ ಹೊಂದಿದವರು ಹಾಗೂ ಸ್ಥಳೀಯ ಕಂಪ್ಯೂಟರ್ ಜ್ಞಾನ ಉಳ್ಳವರಿಗೇ ಆದ್ಯತೆ ನೀಡಲಾಗುವುದು.
PLI/RPLI ಸಂದರ್ಶನದಲ್ಲಿ ಅಂತಿಮ ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯನ್ನು ನೀಡಲಾಗುವುದು.
ಅಂತಿಮ ಪಟ್ಟಿಯಲ್ಲಿ ಆಯ್ಕೆ ಯಾದ ಅಭ್ಯರ್ಥಿಗಳು ತರಬೇತಿಯ ನಂತರ ಪರವಾನಿಗೆ ಪರೀಕ್ಷೆಯನ್ನು ಬರೆಯಬೇಕು ಹಾಗೂ ಉತ್ತೀರ್ಣರಾದ ನಂತರ ಪರವಾನಿಗೆಯನ್ನು ನೀಡಲಾಗುವುದು.
ಅಂತಿಮ ಪಟ್ಟಿಯ ಅಭ್ಯರ್ಥಿಗಳು ಪರಿವಾನಿಗೆ ಪರೀಕ್ಷೆ ಶುಲ್ಕ ರೂ. 400 ಹಾಗೂ ಪರವಾನಿಗೆ ಪಡೆಯಲು ರೊ.150ನ್ನೂ ಠೇವಣಿ ಇಡಬೇಕು
ನೇರವಾಗಿ ಆಯ್ಕೆಯಾದ ಏಜೆಂಟರು ಅಂಚೆ ಕಚೇರಿಯ ಉಳಿತಾಯ ಖಾತೆ ಅಥವಾ NSC/KVP ಯಲ್ಲಿ 5000 ರೂಪಾಯಿ ಭದ್ರತೆ ಒದಗಿಸಬೇಕಾಗುತ್ತದೆ.
ಅಭ್ಯರ್ಥಿಗಳು ಜೀವ ವಿಮೆ ಒದಗಿಸುವ ಯಾವದೇ ಕಂಪನಿಯ ಏಜೆಂಟರು ಆಗಿರಬಾರದು ಎಂದು ಬೆಳಗಾವಿ ಅಂಚೆ ಕಚೇರಿಯ ಅಧೀಕ್ಷಕರು ತಿಳಿಸಿದ್ದಾರೆ.
ವಿಜಯೇಂದ್ರ ಹೆಸರಲ್ಲಿ ರಾಜಣ್ಣ ಕುದುರಿಸಿದ್ದ ಡೀಲ್ ಎಷ್ಟಕ್ಕೆ ಗೊತ್ತಾ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ