ಹುಕ್ಕೇರಿ ಪ್ರಭಾವಿ ನಾಯಕರು, ಅವರಿಗೆ ಸರ್ಟಿಫಿಕೇಟ್ ಬೇಕಾಗಿಲ್ಲ: ಬಿಜೆಪಿಗೆ ತೀರುಗೆಟು ನೀಡಿದ ಶಾಸಕ ಸತೀಶ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರಕಾಶ ಹುಕ್ಕೇರಿ ಪ್ರಭಾವಿ ನಾಯಕರು, ಸಂಸದ, ಸಚಿವರಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಅವರಿಗೆ ಯಾವ ಸರ್ಟಿಫಿಕೇಟ್ ಬೇಕಾಗಿಲ್ಲವೆಂದು ಬಿಜೆಪಿ ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಅವರು ತೀರುಗೆಟು ನೀಡಿದರು.
ಇಲ್ಲಿನ ಖಾಸಗಿ ಹೊಟೇಲ್ ನಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷ, ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಚುನಾವಣೆಯಲ್ಲಿ ಸ್ಪರ್ದಿಸಲು ಡಿಗ್ರಿ ಸರ್ಟಿಫಿಕೇಟ್ ಬೇಕೆಂದು ಬಿಜೆಪಿಯವರು ಹೇಳುತ್ತಿದ್ದಾರೆ. ಪ್ರಭಾವಿ ನಾಯಕರಿಗೆ ಅದರ ಅಗತ್ಯವಿಲ್ಲ, ಅವರಿಗೆ ನಾವು ಬಲ ತುಂಬುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ನೀರಿಕ್ಷೆಗಿಂತ ಹೆಚ್ಚು ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಇದು ಕಾರ್ಯಕರ್ತರ ಗೆಲುವು, ಹೀಗಾಗಿ ಶಿಕ್ಷಕರ ಹಾಗೂ ಪಧವೀದರ ಚುನಾವಣೆ ಬ್ಲಾಕ್ ಅಧ್ಯಕ್ಷರು ಅಚ್ಚುಕಟ್ಟಾಗಿ ಕಾರ್ಯಗಳನ್ನು ಮಾಡಬೇಕಿದೆ.
ಕಮೀಷನ್ ದಂಧೆಗಿಳಿದ ಬಿಜೆಪಿ: ಯಾವುದೇ ಅಭಿವೃದ್ಧಿಯಾಗಬೇಕಾದರೆ ಬಿಜೆಪಿಯಲ್ಲಿ ಶೇ 40 % ರಷ್ಟು ಕಮಿಷನ್ ಇದೆ. ಈಗ್ ಶೇ 50 % ರಷ್ಟು ಕಮಿಷನ್ ಗೆ ಬಂದು ನಿಂತಿದೆ. ಇತ್ತೀಚೆಗೆ ಲಿಂಗಸೂರಿನ ಅಭಿವೃದ್ಧಿ ಕಾಮಗಾರಿಯಲ್ಲಿ 50 % ರಷ್ಟು ಭ್ರಷ್ಟಾಚಾರದ ನಡೆದಿರುವುದು ಕೇಳಿ ಬಂದಿದೆ. ಈ ಭ್ರಷ್ಟಾಚಾರದಲ್ಲಿ ಎಲ್ಲ ಬಿಜೆಪಿಗರು ಅಡಗಿದ್ದಾರೆ. ಇಂತಹ ಚುನಾವಣೆ ಎದುರಿಸಲು ಬಿಜೆಪಿ ಕಮಿಷನ್ ದಂಧೆಗೆ ಇಳಿದಿದೆ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಬಹುಮತ ಸಾಧಿಸಲು 30 ರಿಂದ 50 ಕೋಟಿ ರೂ. ಹಣಬೇಕು, ಕಮೀಷನ್ ದಿಂದ ಇವೆಲ್ಲವೂ ಸಾಧ್ಯ. 5-6 ಸಿಟ್ ಗಾಗಿ ಕೋಟಿ ರೂ. ಬಂಡವಾಳ ಹೂಡಿಕೆ ಮಾಡುತ್ತಾರೆ ಎಂದು ಬಿಜೆಪಿಗೆ ತಿವಿದರು.
ಗ್ರಾಮ ಮಟ್ಟದಲ್ಲಿ ಹೆಚ್ಚಿನ ಪ್ರಚಾರ ಮಾಡುವ ಅಗತ್ಯವಿದೆ. ಅಲ್ಲಿನ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಚುನಾವಣೆ ಸ್ಪರ್ದಿಸುವ ಹುಮ್ಮಸು ಈಗಲೂ ಹುಕ್ಕೇರಿ ಅವರಿಗಿದೆ, ಹೀಗಾಗಿ ಕಣಕ್ಕೆ ದುಮ್ಮಕ್ಕಿದ್ದಾರೆ. ಅವರಿಗೆ ಬಲತುಂಬುವ ಕೆಲಸ ಮಾಡಬೇಕು. ಹೆಚ್ಚು ಅಭ್ಯರ್ಥಿಗಳು ಗೆದ್ದರೆ ಬೆಳಗಾವಿ ಚುನಾವಣೆಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ ಅದಕ್ಕಾಗಿ ಹಗಲಿರುಳು ಶ್ರಮಿಸಿ ಎಂದು ಸೂಚನೆ ನೀಡಿದರು.
ಮಾಜಿ ಸಚಿವ ಎ ಬಿ.ಪಾಟೀಲ್, ಶಾಸಕರಾದ ಗಣೇಶ್ ಹುಕ್ಕೇರಿ, ಮಹಾತೇಂಶ ಕೌಜಲಗಿ, ಮಾಜಿ ಶಾಸಕ ರಮೇಶ ಕುಡಚಿ, ಮಾಜಿ ಶಾಸಕರು ಕಾಕಾ ಸಾಹೇಬ ಪಾಟೀಲ, ರಾಜು ಸೇಠ, ಮಾಜಿ ಶಾಸಕರು ಪಿರೋಜ ಸೇಠ , ಕೆಪಿಸಿಸಿ ಕಾರ್ಯದರ್ಶಿ ಸುನೀಲ ಹನ್ನಮಣ್ಣವರ, ಲಕ್ಷ್ಮಣರಾವ್ ಚಿಂಗಳೆ, ವಿನಯ ನಾವಲಗಟ್ಟಿ, ಅರವಿಂದ ದಳವಾಯಿ, ಪ್ರದೀಪ ಎಂ ಜೆ, ವಿಶ್ವಾಸ ವೈದ್ಯ, ಪಂಚನಗೌಡ , ದ್ಯಾಮನಗೌಡ, ಮಹಾವೀರ ಮೋಹಿತೆ , ಗಜಾನನ ಮಂಗಸೂಳೆ, ಹಾಗೂ ಇತರರು ಇದ್ದರು.
ಬೆಳಗಾವಿ: ಸ್ಮಾರ್ಟ್ ಸಿಟಿ ಪ್ರಾಜಕ್ಟ್ ನಲ್ಲಿ ಅವ್ಯವಹಾರ : ಆರೊಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ