ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಸೀದಿಗಳಲ್ಲಿನ ಮೈಕ್ ತೆರವಿಗೆ ನೀಡಲಾಗಿದ್ದ ಗಡುವು ಮುಗಿದರೂ ಮೈಕ್ ತೆರವಿಗೆ ಸರ್ಕಾರ ಮುಂದಾಗದ ಹಿನ್ನೆಲೆಯಲ್ಲಿ ಮೇ 9ರಿಂದ ರಾಜ್ಯಾಧ್ಯಂತ ಓಂಕಾರ ಸ್ಮರಣೆ ಅಭಿಯಾನ ಆರಂಭಿಸಲು ಶ್ರೀರಾಮಸೇನೆ ಕರೆ ನೀಡಿದೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಈಗಾಗಲೇ ಸರ್ಕಾರಕ್ಕೆ ನೀಡಿದ್ದ ಗಡುವು ಮುಕ್ತಾಯಗೊಂದಿದೆ. ಸರ್ಕಾರ ಕೇವಲ ಮಸೀದಿ, ಮಂದಿರ, ಚರ್ಚ್ ಗಳಿಗೆ ನೋಟೀಸ್ ಕೊಟ್ಟು ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಕಟ್ಟುನಿಟ್ಟಾಗಿ ಮೈಕ್ ತೆಗವಿಗೆ ಮುಂದಾಗಿಲ್ಲ. ಇದು ಸುಪ್ರೀಂ ಕೋರ್ಟ್ ನಿಯಮದ ಉಲ್ಲಂಘನೆಯಾಗಿದೆ. ಹಾಗಾಗಿ ಮೇ.9ರಿಂದ ರಾಜ್ಯಾದ್ಯಂತ ಮುಂಜಾನೆಯಿಂದ ಓಂಕಾರ ನಾಮ ಸ್ಮರಣೆ ಆರಂಭಿಸುತ್ತೇವೆ ಎಂದರು.
ಆಜಾನ್ ಆರಂಭವಾಗುವ ಮೊದಲೇ ಸಾವಿರಕ್ಕೂ ಅಧಿಕ ದೇವಸ್ಥಾನಗಳಲ್ಲಿ ಮುಂಜಾನೆ 5 ಗಂಟೆಗೆ ಪೂಜೆ ಸಲ್ಲಿಸಿ ಸುಪ್ರಭಾತ ಭಜನೆಯೊಂದಿಗೆ ಅಭಿಯಾನ ಆರಂಭವಾಗಲಿದೆ ಎಂದಿದ್ದಾರೆ
ರಾಜ್ಯ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಆಜಾನ್ ತೆರವಿಗೆ ಮುಂದಾಗುತ್ತಿಲ್ಲ. ಸರ್ಕಾರ ಹೆದರುತ್ತಿದೆ. ಮುಸ್ಲಿಂರ ಒಂದು ವೋಟ್ ಕೂಡ ಇವರಿಗೆ ಬೀಳಲ್ಲ ಆದರೂ ಮೈಕ್ ತೆರವುಗೊಳಿಸಲು ಏನು ದಾಡಿ ಇವರಿಗೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೇ.9ರಿಂದ ರಾಜ್ಯಾದ್ಯಂತ ಒಂದು ಸಾವಿರ ದೇವಾಲಯಗಳಲ್ಲಿ ಓಂಕಾರ ನಾಮ ಸ್ಮರಣೆ ಹಮ್ಮಿಕೊಳ್ಳಲಾಗಿದೆ. ನನ್ನೊಂದಿಗೆ ನೂರಾರು ಶ್ರೀರಾಮಸ್ನೆ ಕಾರ್ಯಕರ್ತರು, ಸಾವಿರಾರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಸ್ಟಂಪ್‌ಗೆ ಎಸೆಯಲು ಹೋದ ಬಾಲ್ ಕೋಹ್ಲಿಗೆ ಹಿಟ್: ಕ್ಷಮೆ ಕೇಳಿದ ಬೌಲರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ