ಸತ್ವಯುತ ಸಂಶೋಧನೆ ಇಂದಿನ ಅಗತ್ಯ: ಪ್ರೊ.ಎಂ.ರಾಮಚಂದ್ರಗೌಡ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಂಶೋಧಕರಲ್ಲಿ ಸಂಶೋಧನಾ ಪ್ರವೃತ್ತಿಯೊಂದಿಗೆ ಬದ್ಧತೆ ಹಾಗೂ ಸತ್ವ ಇರುವುದು ಇಂದಿನ ಅಗತ್ಯವಾಗಿದೆ. ಸಂಶೋಧನಾ ವಿಧಾನಗಳು, ಪ್ರಕ್ರಿಯೆಗಳು, ಸಮಸ್ಯಯ ಆಯ್ಕೆ, ಸಂಬಂಧಿತ ಸಾಹಿತ್ಯಾವಲೋಕನ, ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆ, ಸಂಶೋಧನಾ ಪ್ರಕಟಣೆ, ಸಾರಾಂಶ ಬರಹ ಮುಂತಾದ ವಿಷಯಗಳ ಕುರಿತು ವ್ಯಾಖ್ಯಾನ ನೀಡಲು ವಿವಿಧ ಶೈಕ್ಷಣಿಕ ತಜ್ಞರಿಂದ ಧ್ವನಿ ಮುದ್ರಿಕೆಗಳ ಮೂಲಕ ಉಪನ್ಯಾಸ ಏರ್ಪಡಿಸಿದ್ದು ವಿಶೇಷವಾಗಿದೆ. ಎಲ್ಲ ಸಂಶೋಧನಾ ಆಸಕ್ತರಿಗೂ ಇದರಲ್ಲಿ ಮಾರ್ಗದರ್ಶನ ಸಿಗಲಿದೆ ಎಂದು ರಾಣ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡ ಅವರು ಅಭಿಪ್ರಾಯ ಪಟ್ಟರು.

ವಿಶ್ವವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗವು ಆಯೋಜಿಸಿರುವ ರಾಷ್ಟ್ರಮಟ್ಟದ ವಾಣ ಜ್ಯಶಾಸ್ತ್ರದಲ್ಲಿ ಸಂಶೋಧನಾ ಪದ್ಧತಿ ಎಂಬ ಫ್ಯಾಕಲ್ಟಿ ಡೆವಲ್ಹೆಪಮೆಂಟ ಪ್ರೋಗ್ರಾಮ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮವು ಒಂದು ವಾರದವರೆಗೆ 21 ರಿಂದ 27 ರ ವರೆಗೆ ನಡೆಯಲಿದ್ದು, ದೇಶಾದ್ಯಂತ ಸಂಶೋಧನಾಸಕ್ತರು ಪ್ರಯೋಜನ ಪಡೆದುಕೊಳ್ಳಲಿದ್ದಾರೆ ಎಂದರು. ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವ ವಿಶ್ವವಿದ್ಯಾಲಯದ ಪ್ರಮುಖ ಘಟ್ಟದಲ್ಲಿ ಕರೋನಾ ಸೃಷ್ಟಿಸಿರುವ ಅವಾಂತರಗಳ ನಡುವೆಯೂ, ವಾಣಿಜ್ಯ ಶಾಸ್ತ್ರ ವಿಭಾಗದ ಆನ್‌ಲೈನ್ ಪ್ರಥಮ ಪ್ರಯೋಗವನ್ನು ಶ್ಲಾಘಿಸಿದರು.

ಜಾಗತೀಕರಣದ ನಂತರ ಭಾರತ ದೇಶದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ವಾಣಿಜ್ಯ ಹಾಗೂ ನಿರ್ವಹಣಾ ವಿಷಯವನ್ನು ಶೇ.60 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವಾಣಿಜ್ಯ ಹಾಗೂ ನಿರ್ವಹಣಾ ಜ್ಞಾನ ಪಡೆಯಲು ಉತ್ಸುಕತೆ ಅಧಿಕವಾಗಿದೆ. ಇದರಿಂದ ಉದ್ಯಮ ಕ್ಷೇತ್ರ, ಬ್ಯಾಂಕಿಂಗ್, ವ್ಯಾಪಾರ, ಆರ್ಥಿಕತೆ ಕ್ಷೇತ್ರಗಳ ಜೊತೆಗೆ ಸಮಾಜದಲ್ಲಿ ಮಾನವ ಸಂಬಂಧಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತವೆ. ಮಾನವನ ಜೀವನವೇ ಒಂದು ದೊಡ್ಡ ಶಾಲೆಯಿದ್ದಂತೆ. ಒಂದೊಂದು ವಿಶ್ವವಿದ್ಯಾಲಯಗಳು ತಮ್ಮದೇ ಆದ ಸಂಶೋಧನಾ ಪ್ರಬಂಧಗಳ ವಿಧಾನಗಳನ್ನು ಅನುಸರಿಸುತ್ತವೆ. ಈ ಎಲ್ಲಾ ವಿಧಾನಗಳು ನಾವು ಮಾಡುವ ಸಂಶೋಧನಾ ಪ್ರಯತ್ನಕ್ಕೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಸಿಗುವ ಅವಕಾಶವನ್ನು ಕೊಡುವಂತಿರಬೇಕು. ನಿರ್ದಿಷ್ಟ ಸಲಹೆಗಳನ್ನು ನೀಡುವಂತಿರಬೇಕು. ವಾಣ ಜ್ಯಶಾಸ್ತ್ರ ವಿಷಯದಲ್ಲಿನ ಸಂಶೋಧನೆ ಗುಣಾತ್ಮಕತೆಯನ್ನು ಕಾಪಾಡುವ ಪ್ರಯತ್ನ ನಡೆಯಬೇಕು.

ಸಂಶೋಧನಾರ್ಥಿಗಳಲ್ಲಿ ಪಾರಮಾರ್ಶಿಕ ಗ್ರಂಥಗಳನ್ನು ಅಧ್ಯಯನ ಮಾಡುವ ಪ್ರವೃತ್ತಿ ಬೆಳೆಯಬೇಕಾಗಿದೆ. 134 ವರ್ಷಗಳ ಇತಿಹಾಸವಿರುವ ವಾಣ ಜ್ಯ ಶಾಸ್ತ್ರ ವಿಷಯದಲ್ಲಿ ಸಂಶೋಧನೆಗಳು ಯಾವುದೇ ಒಬ್ಬ ವ್ಯಕ್ತಿಯ, ಸಂಸ್ಥೆಯ, ಮೌಲ್ಯಮಾಪಕರ ಅವಲಂಬನೆಗೆ ಒಳಗಾಗದೇ ಸ್ವತಂತ್ರ, ಸ್ವಾವಲಂಬಿ, ಸ್ವಾಯತ್ತತೆ ಹಾಗೂ ಸಮರ್ಥ ಅಧ್ಯಯನವನ್ನು ಮಾಡುವುದರೊಂದಿಗೆ ಸಂಶೋಧನೆಗೆ ಅಮೂಲ್ಯ ಕೊಡುಗೆಯಾಗುತ್ತದೆ ಎಂದು ವಿಶ್ಲೇಶಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ ಇವರು ಕೋವಿಡ್-19 ಭಯದಿಂದ ಹೊರಬರುತ್ತಿದ್ದೇವೆ ಹಾಗೂ ಇದರೊಂದಿಗೆ ನಮ್ಮ ಹೊಸ ಜೀವನಕ್ಕೆ ಕಾಲಿಡುವ ಮೂಲಕ ನಮ್ಮ ವಿಶ್ವವಿದ್ಯಾಲಯದಲ್ಲಿ ಜಾಗರೂಕತೆಯಿಂದ ಈ ರೀತಿಯ ಕಾರ್ಯಕ್ರಮವನ್ನು ಆನ್ಲೈನ್ ಮೂಲಕ ವಾಣ ಜ್ಯ ವಿಭಾಗವು ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಫ್ಯಾಕಲ್ಟಿ ಡೆವಲಪಮೆಂಟ್ ಪ್ರೋಗ್ರಾಮ ನಿಜಕ್ಕೂ ಶ್ಲಾಘನೀಯವಾಗಿದೆ. ಆಸಕ್ತರು ತಮ್ಮ ಮನೆಗಳಲ್ಲಿ ಸುರಕ್ಷಿತತೆಯೊಂದಿಗೆ ಭಾಗವಹಿಸುತ್ತ ಸಮಾಜಕ್ಕೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಂಡು ಜೀವನ ಸಾಗಿಸಬೇಕಾಗಿದೆ. ಶೈಕ್ಷಣ ಕ ಚಟುವಟಿಕೆಗಳ ಜೊತೆಗೆ ಸಮಾಜದ ಸುತ್ತಮುತ್ತಲಿನ ಎಲ್ಲ ಜನರಿಗೆ ಸಹಕರಿಸುತ್ತ, ದೈನಂದಿನ ಜೀವನವನ್ನು ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.

ಈ ಕಾರ್ಯಕ್ರಮದ ನಿರ್ದೇಶಕರಾಗಿರುವ ಪ್ರೊ. ಎಸ್. ಓ ಹಲಸಗಿಯವರು ಉದ್ಘಾಟನಾ ಕಾರ್ಯಕ್ರಮವನ್ನು ನಿರ್ವಹಿಸುತ್ತ ಏಳು ದಿನಗಳ ಕಾರ್ಯಕ್ರಮದಲ್ಲಿ ದೇಶದ ವಿವಿಧ ವಿಶ್ವವಿದ್ಯಾಲಯಗಳ ಶೈಕ್ಷಣ ಕ ತಜ್ಞರಾದ ಪ್ರೊ. ಬಲವಿಂದರ್ ಸಿಂಗ್, ಪ್ರೊ. ಈರೇಶಿಕೆ, ಡಾ. ಆರ್. ಕೆ. ಟೇಲರ್, ಡಾ. ಸುಬ್ರಮಣ್ಯ ಶರ್ಮಾ, ಪ್ರೊ. ಎ.ಬಿ.ಕಾಲಕುಂದ್ರಿಕರ್, ಪ್ರೊ. ಅನಿತಾ ಎಚ್, ಡಾ. ರಮೇಶ ಕುಲಕಣ , ಡಾ. ಮಹಾಜನ, ಡಾ. ಆರ್.ಎಲ್.ಹೈದ್ರಾಬಾದ್, ಡಾ. ಸಚಿನ್ ಕಾಂಬಳೆ, ಡಾ. ಎಂ.ಆರ್.ಸೊಲ್ಲಾಪೂರ್, ಪ್ರೊ. ಎಚ್. ವಾಯ್. ಕಾಂಬಳೆ, ಪ್ರೊ. ಎಸ್. ಬಿ. ಆಕಾಶ, ಪ್ರೊ. ಎಸ್. ಓ. ಹಲಸಗಿ, ಪ್ರೊ. ಬಿ. ಎಸ್. ನಾವಿ ಒಟ್ಟು ೧೫ ಪರಿಣ ತ ಸಂಪನ್ಮೂಲ ವ್ಯಕ್ತಿಗಳು ಸಂಶೋಧನೆಯ ವಿವಿಧ ವಿಷಯಗಳ ಕುರಿತಂತೆ ಉಪನ್ಯಾಸವನ್ನು ನೀಡಲಿದ್ದಾರೆ. ಈ ಆನ್ಲೈನ್ ಕಾರ್ಯಕ್ರಮದ ಯೋಜನೆ ಪ್ರತಿದಿನ ಎರಡು ಅವಧಿಗಳನ್ನು ಒಳಗೊಂಡಿರುತ್ತದೆ. ಈ ಅವಧಿಗಳನ್ನು ಭಾಗವಹಿಸಿರುವ ಸುಮಾರು 700 ಕ್ಕೂ ಹೆಚ್ಚು ಪ್ರತಿನಿಧಿಗಳು ಬೆಳಿಗ್ಗೆ 8 ರಿಂದ ಸಂಜೆ 8 ರ ವರೆಗೆ ಉಪನ್ಯಾಸವನ್ನು ಕೇಳಿ, ಇದಕ್ಕೆ ಸಂಬಂಧಿಸಿದಂತೆ ಬಹುಆಯ್ಕೆಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಬೇಕು ಎಂಬ ವಿವರಣೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪ್ರೊ. ಎಸ್. ಎಂ. ಹುರಕಡ್ಲಿ, ಕುಲಸಚಿವರು (ಮೌಲ್ಯಮಾಪನ), ಪ್ರೊ. ಡಿ.ಎನ್.ಪಾಟೀಲ, ಹಣಕಾಸು ಅಧಿಕಾರಿಗಳು, ಸಲಹೆಗಾರ ಪ್ರೊ. ಎಚ್. ವಾಯ್. ಕಾಂಬಳೆ, ಪ್ರೊ. ಎಸ್. ಬಿ. ಆಕಾಶ ಹಾಗೂ ಕುಲಪತಿಗಳ ವಿಶೇಷ ಅಧಿಕಾರಿಗಳಾದ ಡಾ. ಜಯಪ್ಪ ಅವರು ಉಪಸ್ಥಿತಿರಿದ್ದರು ಹಾಗೂ ಸಂಯೋಜಕರಾದ ವಾಣ ಜ್ಯಶಾಸ್ತ್ರ ವಿಭಾಗದ ಸಚೀಂದ್ರ ಜಿ.ಆರ್, ಯಾಸ್ಮೀನಬೇಗ್ಂ ನದಾಫ್, ಅಶ್ವಿನಿ ಜಾಮೂನಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಯೋಜನೆಗೆ ಶ್ರಮಿಸಿದ ವಿಜಯಪುರದ ಸ್ನಾತಕೋತ್ತರ ಕೇಂದ್ರದ ಮುಕುಂದ ಮುಂಡರಗಿ, ಮಂಜುನಾಥ, ಜಮಖಂಡಿ ಸ್ನಾತಕೋತ್ತರ ಕೇಂದ್ರದ ಮಲ್ಲಿಕಾರ್ಜುನ ಮರಡಿ ಮತ್ತು ತಾಂತ್ರಿಕ ವರ್ಗದವರಾದ ಸಂತೋಷ ರಜಪೂತ, ರಾಚಯ್ಯ ಹಾಗೂ ವಿಭಾಗದ ರೇಷ್ಮಾ ಡಾಂಗೆ ಹಾಗೂ ಸಹಾಯಕ ಈರಣ್ಣಾ ಇವರೆಲ್ಲರಿಗೂ ಕುಲಪತಿಗಳು ಅಭಿನಂದನೆಗಳನ್ನು ತಿಳಿಸಿದರು. ಪ್ರೊ. ಬಿ.ಎಸ್.ನಾವಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button