Belagavi NewsBelgaum NewsCrimeKannada NewsKarnataka NewsNational
*ಚರಂಡಿಯಲ್ಲಿ ಬೈಕ್ ಸವಾರನ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅನುಮಾನಸ್ಪದ ರೀತಿಯಲ್ಲಿ ವ್ಯಕ್ತಿಯ ಮೃತದೇಹ ಪಾಳುಬಿದ್ದ ಚರಂಡಿಯಲ್ಲಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಬೆಣಚಿನಮರಡಿ ಕ್ರಾಸ್ ಬಳಿ ಲಕ್ಷ್ಮಣ ಪೂಜೇರಿ (26) ಎಂಬುವರ ಶವ ಪತ್ತೆಯಾಗಿದೆ.
ಎಪ್ರಿಲ್ 18 ರಂದು ವ್ಯಕ್ತಿ ಸಾವನ್ನಪ್ಪಿರೋ ಶಂಕೆ ವ್ಯಕ್ತವಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಗೋಕಾಕ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಾಥಮಿಕವಾಗಿ ಇದು ಅಪಘಾತ ಎಂದು ಹೆಳಲಾಗುತ್ತಿದೆ. ಆದರೆ ಇದು ಅಪಘಾತವೋ, ಕೊಲೆ ಮಾಡಿ ಯಾರಾದರೂ ಎಸೆದಿದ್ದಾರೋ ಎಂಬ ಬಗ್ಗೆ ತನಿಖೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಗೋಕಾಕ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




