Kannada NewsLatest

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ‘ನಿರುಪಮ’ ಸಿಂಹ ದತ್ತು ಸ್ವೀಕಾರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಾರತೀಯ ಸ್ವಾತಂತ್ರ್ಯದ ಅಮೃತ ಮಹೋತ್ಸವ ( 75ನೆಯ ವರ್ಷಾಚರಣೆಯ) ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರ ಸ್ಮರಣೆಗಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ‘ನಿರುಪಮ’ (ಚೆನ್ನಮ್ಮ) ಎನ್ನುವ ಹೆಸರಿಟ್ಟು ಸಿಂಹಿಣಿಯನ್ನು ದತ್ತಕ ತೆಗೆದುಕೊಳ್ಳಲಾಯಿತು.

ಈ ಕುರಿತು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ ಎಂ ರಾಮಚಂದ್ರಗೌಡ, ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಕುಲಸಚಿವರು ಮೌಲ್ಯಮಾಪನ ರಾದ ಪ್ರೊ. ಎಸ್. ಎಂ ಹೂರಕಡ್ಲಿ ಹಣಕಾಸು ಅಧಿಕಾರಿಗಳಾದ ಪ್ರೊ. ಡಿ ಎನ್ ಪಾಟೀಲ್ ಅಲ್ಲದೆ ವಿಶ್ವವಿದ್ಯಾಲಯದ ಪ್ರಾಧಿಕಾರಗಳಾದ ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳ ಸಮಸ್ತರ ಸಮ್ಮುಖದಲ್ಲಿ ಅನುಶಾಶನವನ್ನು ಹೊರಡಿಸಲಾಯಿತು.

ಸ್ವಾತಂತ್ರ ದೇವಿಯ ರಕ್ಷಣೆ, ಹುತಾತ್ಮರ ಸ್ಮರಣೆ ಹಾಗೂ ಅಪೂರ್ವ ಜೀವ ಸಂಕುಲದದ ರಕ್ಷಣೆಯ ಉದ್ದೇಶದಿಂದ ಈ ದತ್ತಕವನ್ನು ತೆಗೆದುಕೊಳ್ಳಲಾಗಿದ್ದು ಸದರಿ ಸಿಂಹದ ಜೀವಿತಾವಧಿವರೆಗೂ ವಿಶ್ವವಿದ್ಯಾಲವು ಅದರ ವೆಚ್ಚವನ್ನು ಭರಿಸುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button