Politics

*ವಾಲ್ಮೀಕಿ ನಿಗಮ ಹಗರಣ: ಯಾರಿಂದ ಎಷ್ಟು ವಸೂಲಿ?*

ಪ್ರಗತಿವಾಹಿನಿ ಸುದ್ದಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ನಿಯಮ 69ರಡಿ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.

Home add -Advt

ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ವೇಳೆ ವಶಕ್ಕೆ ಪಡೆದಿರುವ ಹಣದ ಬಗ್ಗೆಯೂ ವಿವರಿಸಿದ್ದಾರೆ.

ನಮ್ಮ ಎಸ್.ಐ.ಟಿ.ಯು ಇದುವರೆಗೆ ಮುಟ್ಟು ಗೋಲು ಹಾಕಿಕೊಂಡಿರುವ ಮೊತ್ತ

ವಶಪಡಿಸಿಕೊಂಡ ಮೊತ್ತ (ರೂ.) ವಶಪಡಿಸಿಕೊಂಡ ವಿವರ:

1 -14/2024 8,21,62,600 ಸತ್ಯನಾರಾಯಣ ವರ್ಮಾ

2 16/2024 3,62,47,200 ಪದ್ಮನಾಭ ಜೆ.ಜಿ.

3 17/2024 30,00,000 ಪದ್ಮನಾಭ ಜೆ.ಜಿ.

4 18/2024 1,49,65,200 ನಾಗೇಶ್ವರ ರಾವ್

5- 20/2024 30,00,000 ಚಂದ್ರಮೋಹನ್

6- 26/2024 12,50,000 ಜಿ.ಕೆ. ಜಗದೀಶ್

7- 27/2024 3,10,000 ಸತ್ಯನಾರಾಯಣ ವರ್ಮಾ

8 -28/2024 24,00,000 ಸತ್ಯನಾರಾಯಣ ವರ್ಮಾ
ಒಟ್ಟು ನಗದು 14,33,35,000

9 -207 ಗ್ರಾಂ ಚಿನ್ನ 13,50,000 ಚಂದ್ರಮೋಹನ್

10- 47.6 ಗ್ರಾಂ ಚಿನ್ನ 3,09,400 ಜಿ.ಕೆ. ಜಗದೀಶ್

ಒಟ್ಟು ನಗದು 14,49,94,400

11- ವಿವಿಧ 217 ಬ್ಯಾಂಕ್ ಅಕೌಂಟ್ ಗಳನ್ನು ಗುರುತಿಸಿ ಅವುಗಳಲ್ಲಿದ್ದ 13,72,94,132 ರೂ.ಗಳನ್ನು ಫ್ರೀಜ್ ಮಾಡಲಾಗಿರುತ್ತದೆ.

12 – ಈ ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯನಾರಾಯಣ ವರ್ಮಾ ಮತ್ತು ಇತರೆ ಆರೋಪಿಗಳು ಅಕ್ರಮವಾಗಿ ಬೇರೆ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿದ್ದ 1.50 ಕೋಟಿ ರೂ. ಹಣವನ್ನು ಜನರೇ ವಾಪಾಸ್ ಕಟ್ಟಿದ್ದಾರೆ. ಆ ಹಣ ಕೂಡ ಸರ್ಕಾರದಲ್ಲಿದೆ.
1,50,00,000

13 -ಎಸ್.ಐ.ಟಿ. ಯು ಸತ್ಯನಾರಾಯಣ ವರ್ಮಾ ಲ್ಯಾಂಬೋರ್ಗಿನಿ ಉರಸ್ ಎಂಬ ಕಾರ್‌ನ್ನು ಬಿಗ್‌ಬಾಯ್ಸ್ ಟಾಯ್ಸ್ ಲಿ. ಕಂಪನಿ ಮೂಲಕ ಖರೀದಿ ಮಾಡಿದ್ದ. ಈಗ ಆ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಕಂಪನಿಯು ಕಾರನ್ನು ವಾಪಸ್ ಪಡೆದು 3,31,19,166 ರೂ. ಹಣವನ್ನು ಸರ್ಕಾರಕ್ಕೆ ಮರಳಿಸುವುದಾಗಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿರುತ್ತಾರೆ.

3,31,19,166
ವಶಪಡಿಸಿಕೊಂಡ
ಮೊತ್ತ (ರೂ.) ವಶಪಡಿಸಿಕೊಂಡ ವಿವರ

14- ಇದೇ ಸತ್ಯನಾರಾಯಣ ವರ್ಮಾ 1.21 ಕೋಟಿಗೂ ಹೆಚ್ಚು ಬೆಲೆಬಾಳುವ ಬೆಂಜ್ ಕಾರನ್ನು ಖರೀದಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಕಾರನ್ನು ಎಸ್.ಐ.ಟಿ.ಯು ತನ್ನ ವಶಕ್ಕೆ ಪಡೆದಿರುತ್ತದೆ. ಈ ಕಾರನ್ನೂ ಸಹ ಮರಳಿ ಕಂಪನಿಗೆ ನೀಡಿ ಅದರ ಮೌಲ್ಯವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಚಾಲನೆಯಲ್ಲಿದೆ 1,21,00,000 .

15-ದಿನಾಂಕ:23.05.2024 ರಂದು ಅಕ್ರಮವಾಗಿ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ[ ರತ್ನಾಕರ್ ಬ್ಯಾಂಕ್] ಎಸ್.ಟಿ. ನಿಗಮದ ಖಾತೆಗೆ 5.00 ಕೋಟಿ ಮರಳಿಸಿರುತ್ತಾರೆ.
5,00,00,000

16 -ಯೂನಿಯನ್ ಬ್ಯಾಂಕ್‌ನಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದ್ದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 46.00 ಕೋಟಿಗೂ ಹೆಚ್ಚು ಹಣ ರತ್ನಾಕರ್ ಬ್ಯಾಂಕ್ ಲಿ. ನಲ್ಲಿದೆ. ಈ ಹಣವನ್ನು ನಮ್ಮ ಎಸ್.ಐ.ಟಿ. ತಂಡವು ಫ್ರೀಜ್ ಮಾಡಿರುತ್ತದೆ. ಅದನ್ನು ಹಿಂಪಡೆಯುವ ಪ್ರಕ್ರಿಯೆ ಪ್ರಾರಂಭಿಸಲಾಗುತ್ತಿದೆ. 46,00,00,000

ಒಟ್ಟು 85,25,07,698

Related Articles

Back to top button