ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಇಂದಿನ ಆಧುನಿಕ ಯುಗದಲ್ಲಿ ಪುರುಷರಷ್ಟೇ ಮಹಿಳೆಯರು ಸಮಾನವಾಗಿ ಸಾಧನೆ ಮಾಡುತ್ತಾ ಶಿಕರದತ್ತ ಹೆಜ್ಜೆ ಇಡುತ್ತಿದ್ದಾರೆ. ಮಹಿಳೆಯರು ಸ್ವಾವಲಂಭಿಯಾಗಿ ಬದುಕಲು ಮಾರ್ಗದರ್ಶನ ಅತ್ಯವಶ್ಯಕ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ತಾಲೂಕಿನ ನಾಗರಮುನ್ನೋಳ್ಳಿ ಗ್ರಾಮದ ಶ್ರೀರಕ್ಷೆ ಮಹಿಳಾ ಸ್ವ-ಸಹಾಯ ಸಂಘ ಇವರ ಆಶ್ರಯದಲ್ಲಿ ರವಿವಾರ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಕೊರೊನಾ ವಾರಿಯರ್ಸ ಆಶಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ನೂತನ ಗ್ರಾಪಂ ಸದಸ್ಯರ ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಕಿಳರಿಮೆ ಬಿಟ್ಟು ಶ್ರೇದ್ದೆಯಿಂದ ಕೆಲಸ ಮಾಡಬೇಕು. ಮಹಿಳೆಯರು ಸಕಾರಾತ್ಮಕ ವಿಚಾರ ಮಾಡುವ ಪೃವೃತ್ತಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಬರುವ ಕಷ್ಟಸುಖಗಳನ್ನು ಮೆಟ್ಟಿನಿಲ್ಲುವ ಆತ್ಮವಿಶ್ವಾಸ ಬೆಳೆಸಿಕೊಂಡರೇ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ ಎಂದರು.
ಮಹಿಳೆಯರು ಸಮಾಜದಲ್ಲಿ ಸಬಲರಾಗಬೇಕು ಹಾಗೂ ಅವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು ಎಂಬ ಕನಸು ನಮ್ಮದಾಗಿದೆ. ಮಹಿಳೆಯು ಆರ್ಥಿಕವಾಗಿ ಸಾಮಾಜಿಕವಾಗಿ ಸ್ವಂತ ಕಾಲಮೇಲೆ ನಿಂತುಕೊಂಡು ಇನ್ನೋಬ್ಬರಿಗೆ ಮಾರ್ಗದರ್ಶನ ಮಾಡುವ ಹಾಗೇ ಬೆಳೆವಣಿಗೆ ಕಾಣಲು ಶ್ರಮವಹಿಸಬೇಕು. ಮನೆಯೇ ಮೊದಲ ಪಾಠ ಶಾಲೆ ಎಂದು ತಿಳಿದುಕೊಂಡು ಮಕ್ಕಳಿಗೆ ಭಾರತೀಯ ಸಂಸ್ಕøತಿ ತಿಳಿಸಬೇಕು ಎಂದರು.
ರಾಯಚೂರಿನ ಪ್ರಗತಿಪರ ಮಹಿಳೆ ಶ್ರೀಮತಿ ಕವಿತಾ ಮಿಶ್ರಾ ಮಾತನಾಡಿ. ರೈತರು ಕಷ್ಟ ಪಟ್ಟು ದುಡಿದರೇ ಭೂಮಿತಾಯಿ ಕೈಬಿಡುದಿಲ್ಲ. ಶ್ರಮ ವಹಿಸಿ ದುಡಿಯುವ ಛಲ ಎಲ್ಲ ಮಹಿಳೆಯರಲ್ಲಿ ಬರಬೇಕು. ಮಹಿಳೆ ಬೆನ್ನು ಹಿಂದೆ ಪುರುಷರು ಸಹಾಯ ಸಹಕಾರ ನೀಡಿದರೇ ಮಹಿಳೆ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ರೈತರು ಋತುವಾರಿತ ಕೃಷಿ ಬೆಳೆ ಬೆಳೆಯಬೇಕು. ಇದರಿಂದ ಬೆಳೆದ ಬೆಳೆಗೆ ಹೆಚ್ಚಿನ ಇಳುವರಿ ಬರುತ್ತದೆ. ರೈತರು ಪರಿಸ್ಥಿತಿ ವಿರುದ್ದ ಹೋರಾಡದೇ ಪರಿಸ್ಥಿತಿ ಜೊತೆ ಹೊಂದಾಣಿಕೆ ಮಾಡಿಕೊಂಡರೇ ಜೀವನ ನಡೆಯುತ್ತದೆ. ಒಂದೇ ಬೆಳೆಗೆ ಅಂಟಿಕೊಳ್ಳದೇ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಯಶಸ್ವಿ ಲಭಿಸುತ್ತದೆ ಎಂದರು.
ವೈದ್ಯರು. ಇಂಜನೀಯರು, ಉದ್ಯಮಿದಾರರು ಇಂದು ಕೋಟಿ ಕೋಟಿ ಹಣ ಪಡೆಯುವ ಹಾಗೆ ರೈತರು ಕೋಟಿ ಕೋಟಿ ಹಣ ಪಡೆಯಲು ಶ್ರೀಗಂಧ ಬೆಳೆ ಬೆಳೆಯಬೇಕು. ಬರಡು ಭೂಮಿಯಲ್ಲಿ ಒಂದು ಚೀಲ ಕಾಳು ಬರದ ಸ್ಥಿತಿಯಲ್ಲಿದ್ದ ನನಗೆ ಇಂದು ಭೂಮಿತಾಯಿಂದ ಸರಳ. ಸನ್ಮಾನ ಹಾಗೂ ಗೌರವದ ಬದುಕು ಕಲಿಸಿಕೊಟ್ಟಿದೆ. ಇಂದು ಕೃಷಿಯೇ ಕಸಬುವನ್ನಾಗಿ ನಂಬಿಕೊಂಡಿದ್ದೇನೆ ಎಂದರು.
ದಿವ್ಯ ಸಾನಿಧ್ಯವನ್ನು ಚಿಕ್ಕೋಡಿ ಶ್ರೀ ಶಾರದಾದೇವಿ ಸೇವಾಶ್ರಮದ ಅಧ್ಯಕ್ಷರಾದ ಮಾತಾಜಿ ಭಕ್ತಿಮಯಿ ವಹಿಸಿದ್ದರು. ವೇದಿಕೆ ಮೇಲೆ ಪುರಸಭೆ ಸದಸ್ಯ ರಂಜನಾ ಕಾಮಗೌಡ. ಗ್ರಾಪಂ ಉಪಾಧ್ಯಕ್ಷ ದುಂಡವ್ವ ಪಾಟೀಲ. ತಾಪಂ ಸದಸ್ಯ ಬಾಳವ್ವ ಹಾಲಟ್ಟಿ, ಶ್ರೀದೇವಿ ಈಟಿ, ಸುನೀತ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪ ಮರ್ಯಾಯಿ, ವಿನಾಯಕ ಕುಂಬಾರ, ದಾನಪ್ಪ ಕೊಟಬಾಗಿ, ಪ್ರಭು ಡಬ್ಬನ್ನವರ ಮುಂತಾದವರು ಇದ್ದರು. ಆಶಾ ಮನಗೂಳಿ ಸ್ವಾಗತಿಸಿದರು. ಶರಾವತಿ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ