ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶೋತ್ಸವದ ಪೆಂಡಾಲ್ ಗಳಲ್ಲಿ ಸಾವರ್ಕರ್ ಫೋಟೊ ಇಡುವ ವಿಷಯಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಲೋಕ್ ಕುಮಾರ್ ಅವರು ನೀಡಿದ ಹೇಳಿಕೆಗೆ ಬೆಳಗಾವಿ ದಕ್ಷಿಣ ಶಾಸಕ ಭಯ ಪಾಟೀಲ ಖಾರ ಪ್ರತಿಕ್ರಿಯೆ ನೀಡಿದ್ದಾರೆ.
ಸಾವರ್ಕರ್ ಫೋಟೊ ಇಡುವ ಮುನ್ನ ಪರವಾನಗಿ ಪಡೆಯಬೇಕು ಎಂಬ ಎಡಿಜಿಪಿ ಹೇಳಿಕೆಗೆ ಪ್ರತಿಯಾಗಿ ಪ್ರಶ್ನಿಸಿರುವ ಅಭಯ ಪಾಟೀಲ “ಯಾವ ಪರವಾನಗಿ..? ನಾವೇನು ಅಫ್ಜಲ್ ಗುರು ಫೋಟೊ ಇಡ್ತಾ ಇದ್ದೀವಾ?” ಎಂದು ಕೇಳಿದ್ದಾರೆ.
1905ರಲ್ಲಿ ಬಾಲಗಂಗಾಧರ ಟಿಳಕರು ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಚಾಲನೆ ನೀಡಿದ ನಂತರದಲ್ಲಿ ಅವರ ಫೋಟೊ ಸೇರಿದಂತೆ ಗಣ್ಯರು, ಮಹಾಪುರುಷರ ಫೋಟೊಗಳನ್ನಿಡುವುದು ಸಂಪ್ರದಾಯದಂತೆ ನಡೆದು ಬಂದಿದೆ. ಇದಕ್ಕೆ ಸಾಕ್ಷಿಯಾಗಿ ಬೆಳಗಾವಿಯ ಸಾರ್ವಜನಿಕ ಗಣೇಶೋತ್ಸವ ಪೆಂಡಾಲ್ ಗಳ ಹಳೆಯ ಫೋಟೊಗಳನ್ನು ಗಮನಿಸಲಿ ಎಂದು ಅವರು ಹೇಳಿದ್ದಾರೆ.
ನಮ್ಮ ಪರಂಪರೆಗನುಸಾರ ನಾವು ಯಾರ ಫೋಟೊಗಳನ್ನೂ ಇರಿಸುತ್ತೇವೆ. ಇದಕ್ಕೆ ಯಾರ ಪರವಾನಗಿಯೂ ಬೇಕಿಲ್ಲ ಎಂದು ಸಹ ಅವರು ಹೇಳಿದ್ದಾರೆ.
ಅಥಣಿ ತಾಲೂಕಿನ ಅಭಿವೃದ್ಧಿ ವೈಖರಿಗೆ ಕನ್ನಡಿ ಹಿಡಿದಂತಿದೆ ಈ ರಸ್ತೆ ಕಾಮಗಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ