ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಎ.ಪಿ.ಎಮ್.ಸಿ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ವಿ ಸೆಂಟರ್ ದಲ್ಲಿ ಬಾಲಾಜಿ ಶಿವಲಿಂಗಪ್ಪ ಸಾವಳಗಿ, ಇವರ ಮನೆಯಲ್ಲಿ ಬಂಗಾರದ ಆಭರಣ ಹಾಗೂ ನಗದು ಹಣ ಕಳುವು ಪ್ರಕರಣ ಸಂಬಂಧ ಮೂವರು ಕಳ್ಳರನ್ನು ಬಂಧಿಸಲಾಗಿದೆ.
ಮೇಲಾಧಿಕಾರಿಗಳ ಮಾರ್ಗದರ್ಶದಲ್ಲಿ ಹಾಗೂ ಮಂಜುನಾಥ ಜಿ ಹಿರೇಮಠ ಪಿಐ ಹಾಗೂ ಎಪಿಎಂಸಿ ಠಾಣೆಯ ಪಿಎಸ್‌ಐ ರವರುಗಳು ಮತ್ತು ಸಿಬ್ಬಂದಿಯವರ ತಂಡ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಬೆಳಗಾವಿ ವೈಭವ ನಗರದ ಖಾಜಾ ಅಸ್ಲಮ್ ರಫೀಕ ಸಯ್ಯದ ಶೇಖ (32), ಇರ್ಫಾನ ಖತಾಲ ಶೇಖ (32), ಸಿದ್ದೇಶ್ವರ ನಗರದ ತಂಜೀಮ ಇಸ್ಮಾಯಿಲ್ ಖಾನಾಪುರಿ (30) ಬಂಧಿತ ಆರೋಪಿಗಳು.
ಆರೋಪಿಗಳಿಂದ 75,000/- ಮೌಲ್ಯದ 15 ಗ್ರಾಂ ಚಿನ್ನಾಭರಣ, 11,33,32,625/- ಮೌಲ್ಯದ 17 ಕಿಲೋ 425 ಗ್ರಾಂ ಬೆಳ್ಳಿಯ ಆಭರಣಗಳು, ನಗದು ಹಣ 1000/- ರೂ 1,40,000/- ಮೌಲ್ಯದ 4 ಟಿವಿಗಳು ಹಾಗೂ ಕಳ್ಳತನಕ್ಕೆ ಬಳಸಿದ ಒಂದು ಕಾರು ಮತ್ತು 2 ಮೋಟಾರ್ ಸೈಕಲ್ ಗಳು ಒಟ್ಟು 6,00,000/- ರೂ. ಸೇರಿ ಒಟ್ಟು 19,47,625/- ರೂ ಮೌಲ್ಯದ ಸ್ವತ್ತನ್ನು ಆರೋಪಿಗಳಿಂದ ಜಪ್ತಪಡಿಸಿಕೊಂಡು, ಸದರಿ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಪಿಐ ಎಪಿಎಂಸಿ ಹಾಗೂ ತಂಡದ ಸದಸ್ಯರ ಕಾರ್ಯವನ್ನು ಪೊಲೀಸ್ ಆಯುಕ್ತರು & ಉಪ ಆಯುಕ್ತರುಗಳು ಶ್ಲಾಘಿಸಿರುತ್ತಾರೆ.
ಕರ್ನಾಟಕ ಯುವ ನೀತಿ ಕರಡು: ನಾಳೆ ವಿಭಾಗಮಟ್ಟದ ಅಭಿಪ್ರಾಯ ಸಂಗ್ರಹ ಸಭೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ