Kannada NewsLatest

ಸಾರಿಗೆ ಸಿಬ್ಬಂದಿಗಳಿಂದಲೇ ಬಸ್ ಮೇಲೆ ಕಲ್ಲು ತೂರಾಟ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಾರಿಗೆ ನೌಕರರ ಮುಷ್ಕರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮುಷ್ಕರ ಹಿಂಪಡೆಯುವಂತೆ ಸರ್ಕಾರ ಮಾಡಿರುವ ಮನವಿಗೂ ಸಾರಿಗೆ ಸಿಬ್ಬಂದಿ ಜಗ್ಗುತ್ತಿಲ್ಲ.

ಈ ನಡುವೆ ಕೆಲ ಜಿಲ್ಲೆಗಳಲ್ಲಿ ವಿರಳವಾಗಿ ಬಸ್ ಸಂಚಾರ ಆರಂಭವಾಗಿದೆ. ಬೆಳಗಾವಿಯಲ್ಲಿ ಪ್ರತಿಭಟನಾ ನಿರತ ಸಾರಿಗೆ ನೌಕರರ ಕಣ್ತಪ್ಪಿಸಿ ಬಸ್ ಓಡಾಟ ನಡೆಸಿದ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿಗಳೇ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

Home add -Advt

ಬೆಳಗಾವಿ ಹೊರವಲಯದ ಎನ್ ಹೆಚ್ 4ನಲ್ಲಿ ಸಾರಿಗೆ ಸಿಬ್ಬಂದಿಗಳೇ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ.

 

Related Articles

Back to top button