Kannada NewsLatest

ಬೆಳಗಾವಿಯಿಂದ ಮತ್ತಿಬ್ಬರು ಆರೋಪಿಗಳ ಗಡಿಪಾರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಚಿಕ್ಕೋಡಿ ಉಪವಿಭಾಗದ ನಿಪ್ಪಾಣಿ ಗ್ರಾಮಾಂತರ ಠಾಣಿ ಹಾಗೂ ನಿಪ್ಪಾಣಿ ನಗರ ಠಾಣಾ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಮಟಕಾ, ಅಕ್ರಮ ಜೂಜಾಟ, ಅಕ್ರಮ ಸರಾಯಿ ಮಾರಾಟ ಮುಂತಾದ ಅಪರಾಧಗಳಲ್ಲಿ ಭಾಗಿಯಾಗಿದ್ದ ಇಬ್ಬರು ರೂಢಿಗತ ಅಪರಾಧಿಗಳ ವಿರುದ್ಧ ಗಡಿಪಾರು ವರದಿಗಳನ್ನು ಚಿಕ್ಕೋಡಿ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಲಾಗಿತ್ತು. ಸದರಿ ವರದಿಗಳ ಆಧಾರದ ಮೇಲೆ ಉಪವಿಭಾಗಾಧಿಕಾರಿಗಳು ಇಬ್ಬರು ಆರೋಪಿಗಳನ್ನು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಿಂದ ಗಡಿಪಾರು ಮಾಡಿ ಆದೇಶಿಸಿದ್ದಾರೆ.

ನಿಪ್ಪಾಣಿ ತಾಲೂಕಿನ ಅಕ್ಕೋಳದ ಚಂದ್ರಕಾಂತ ಶಂಕರ ವಡ್ಡರ ಹಾಗೂ ನಿಪ್ಪಾಣಿ ತಾಲೂಕಿನ ಜಮದಾರ ಪ್ಲಾಟ್ ನ ಸಂಜಯ್ ಚಂದ್ರಕಾಂತ ಎಂಬುವವರನ್ನು ಗಡಿಪಾರು ಮಾಡಲಾಗಿದೆ.

ಚಂದ್ರಕಾಂತ್ ಸುಮಾರು 36 ಮಟಕಾ ಜೂಜಾಟ ಪ್ರಕರಣಗಳಲ್ಲಿ ಹಾಗೂ ಒಂದು ಅಕ್ರಮ ಸರಾಯಿ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದು ಈತನನ್ನು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಿಂದ ಕೋಲಾರ ಜಿಲ್ಲೆಗೆ 9 ತಿಂಗಳುಗಳ ಕಾಲ ಗಡಿಪಾರು ಮಾಡಲಾಗಿದೆ.

ಸಂಜಯ ಚಂದ್ರಕಾಂತ ಸುಮಾರು 4 ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈತನನ್ನು ರಾಮದುರ್ಗ ತಾಲೂಕಿಗೆ ಗಡಿಪಾರು ಮಾಡಲಾಗಿದೆ.

ನಿನ್ನೆಯಷ್ಟೇ ಬೆಳಗಾವಿ ಜಿಲ್ಲೆಯಿಂದ 10 ಆರೋಪಿಗಳನ್ನು ಗಡಿಪಾರು ಮಾಡಿ ಆದೇಶ ನೀಡಲಾಗಿತ್ತು. ಇದರ ಬೆನ್ನಲ್ಲೇ ಇಂದು ಮತ್ತೆ ಇಬ್ಬರು ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ.

ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ABVP ಪ್ರತಿಭಟನೆ

https://pragati.taskdun.com/latest/belagaviabvpprotest/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button