Kannada NewsLatest

ಚಿಕ್ಕೋಡಿಯಲ್ಲಿ ಪತ್ನಿ ಸಾವಿನ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಪತಿ, ಹೆಣ್ಣು ಮಕ್ಕಳು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹೆಂಡತಿಯ ಸಾವಿನಿಂದ ಮನನೊಂದಿದ್ದ ಪತಿ ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಪೊಗತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.

ವಾರದ ಹಿಂದೆ ಚೆನ್ನವ್ವ ರಂಗಾಪುರೆ ಸಾವನ್ನಪ್ಪಿದ್ದರು. ಚೆನ್ನವ್ವಳ ಅಗಲಿಕೆಯಿಂದ ಮನನೊಂದ ಪತಿ ಕಾಡಪ್ಪ ಹಾಗೂ ಇಬ್ಬರು ಹೆಣ್ಣುಮಕ್ಕಳು ಇದೀಗ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Home add -Advt

ಮೃತರನ್ನು ಕಾಡಪ್ಪ (48) ಹಾಗೂ ಮಕ್ಕಳಾದ ಕೀರ್ತಿ (20, ಸ್ಫೂರ್ತಿ (18) ಎಂದು ತಿಳಿದುಬಂದಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 ಘಟನೆಯ ವಿವರ – ಪೋಗತ್ಯಾನಟ್ಟಿ ಗ್ರಾಮದ ಹೊರವಲಯದ ತೋಟದ ಮನೆಯಲ್ಲಿ ಚೆನ್ನವ್ವ ಮತ್ತು ಕಾಡಪ್ಪ ಪ್ರದಾನಿ ರಂಗಾಪುರೆ ದಂಪತಿಗಳು ವಾಸವಿದ್ದರು.

ಕಳೆದ ಎಂಟು ದಿನಗಳ ಹಿಂದೆ ಚೆನ್ನವ್ವ(೪೦) ಹೃದಯಾಘಾತದಿಂದ ನಿಧನ ಹೊಂದಿದ್ದರು ಎನ್ನಲಾಗಿದೆ. ಅದಕ್ಕಾಗಿ ಮನನೊಂದ ಕಾಡಪ್ಪಾ(೪೮)ಮತ್ತು ತನ್ನ ಎರಡು ಹೆಣ್ಣು ಮಕ್ಕಳು ಕೀರ್ತಿ(೨೦) ಮತ್ತು ಸ್ಪೂರ್ತಿ(೧೮) ಮಕ್ಕಳು ಸಮೇತವಾಗಿ ಭಾನುವಾರ ಬೆಳಿಗಿನ ೪ರ ಸುಮಾರಿಗೆ ತನ್ನ ಮನೆಯಲ್ಲಿ ನೆಣು ಹಾಕಿಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.

ಈ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಘಟನೆಯಿಂದಾಗಿ ಇಡಿ ಗ್ರಾಮದಲ್ಲಿ ಸ್ಮಶಾನದ ವಾತಾವರಣ ನಿರ್ಮಾಣವಾಗಿದ್ದು ಜನರೆಲ್ಲರೂ ಮರುಗುವಂತಾಗಿದೆ.

ಘಟನಾ ಸ್ಥಳಕ್ಕೆ ಚಿಕ್ಕೋಡಿ ಪಿಎಸ್‌ಐ ರಾಕೇಶ ಬಗಲಿ ಮತ್ತು ಅಶೋಕ ಕುಳ್ಳೂರ ಆಗಮಿಸಿ ಸ್ಥಳ ಪರಿಸಿಲಿಕೊಂಡು ಪ್ರಖರಣವನ್ನು ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ಜುಲೈ 15ರಿಂದ ಪಿಯು ಶೈಕ್ಷಣಿಕ ವರ್ಷ ಆರಂಭ

Related Articles

Back to top button