ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ 10 ದಿನಗಳವರೆಗೂ ಬಂದೋಬಸ್ತಗಾಗಿ ಸುಮಾರು 4931 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸುಸಜ್ಜಿತವಾಗಿ ನಡೆಯುವ ಉದ್ದೇಶದಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಆರು ಜನ ಎಸ್ಪಿ, 11 ಹೆಚ್ಚುವರಿ ಎಸ್ಪಿ, 43 ಡಿಎಸ್ ಪಿ, 95 ಸಿಪಿಐ, 241 ಪಿಎಸ್ ಐ, 298 ಎಎಸ್ಐ, 2829 ಹೆಡ್ ಕಾನ್ ಸ್ಟೇಬಲ್, 800 ಕೆಎಸ್ ಆರ್ ಪಿ ತುಕಡಿ, 170 ಕ್ಯೂಆರ್ ಟಿ, 35 ಗರುಡಾ ತಂಡ, 130 ಎಎಸ್ ಸಿ ತಂಡ, 100 ವಾಯರ್ ಲೈಸ್ ಸಿಬ್ಬಂದಿ, 100 ಹೋಮ್ ಗಾಡ್೯ ಸೇರಿದಂತೆ ಸುಮಾರು 4931 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಹೊರ ಜಿಲ್ಲೆಯಿಂದ ಆಗಮಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಸುಸಜ್ಜಿತವಾದ ವಸತಿ ವ್ಯವಸ್ಥೆ, ಊಟೋಪಹಾರದ ಸಕಲ ಸಿದ್ಧತೆಯನ್ನು ನಗರ ಪೊಲೀಸ್ ಇಲಾಖೆ ಮಾಡಿಕೊಂಡಿದೆ.
ಅಲ್ಲದೆ, ಅಗ್ನಿ ಶಾಮಕ ದಳ 12, ಅಂಬ್ಯೂಲೆನ್ಸ್ 16, ಗರುಡಾ ಪಡೆ 1, ಕೆಎಸ್ ಆರ್ ಟಿಸಿ ಬಸ್ 60, ಚೆಕ್ ಪೊಸ್ಟ್ 26 ನಿರ್ಮಿಸಲಾಗಿದೆ. ಇಷ್ಟೆ ಅಲ್ಲ ಬೆಳಗಾವಿ ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಸುವರ್ಣ ವಿಧಾನಸೌಧದ ಸುತ್ತಲೂ ನಿಷೇಧಾಜ್ಞೆ ಹೊರಡಿಸಲಾಗಿದೆ ಎಂದು ನಗರ ಪೊಲೀಸ್ ಇಲಾಖೆ ತಿಳಿಸಿದೆ.
*ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ; ಮುಖ್ಯಶಿಕ್ಷಕ ಸಸ್ಪೆಂಡ್*
https://pragati.taskdun.com/teachersuspendkatteri-schoolmandya/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ