Latest

*ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ; ಮುಖ್ಯಶಿಕ್ಷಕ ಸಸ್ಪೆಂಡ್* *ಪೋಕ್ಸೋ ಪ್ರಕರಣ*

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಕಟ್ಟೇರಿ ಪ್ರೌಢಶಾಲೆಯ ಮುಖ್ಯಶಿಕ್ಷಕನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಟ್ಟೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಿನ್ಮಯಾನಂದ ಮೂರ್ತಿ ಅಮಾನತುಗೊಂಡಿರುವ ಶಿಕ್ಷಕ. ಶಿಕ್ಷಕನನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಆದೇಶ ಹೊರಡಿಸಿದ್ದಾರೆ.

Home add -Advt

ಎರಡು ದಿನಗಳ ಹಿಂದೆ ರಾತ್ರಿ ಕಟ್ಟೇರಿ ವಸತಿ ಶಾಲೆಯ ಹಾಸ್ಟೇಲ್ ಗೆ ಬಂದಿದ್ದ ಶಿಕ್ಷಕ ಚಿನ್ಮಯಾನಂದ ಮೂರ್ತಿ, ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಕೆಲ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ. ಈ ವೇಳೆ ವಿದ್ಯಾರ್ಥಿನಿಯರು ಶಿಕ್ಷಕನಿಗೆ ಧರ್ಮದೇಟು ನೀಡಿದ್ದರು. ತಪ್ಪಿಸಿಕೊಳ್ಳಲು ಮುಂದಾದಾಗ ಹಾಸ್ಟೇಲ್ ಗೇಟ್ ಬಂದ್ ಮಾಡಿ ಪೊರಕೆ, ದೊಣ್ಣೆಯಿಂದ ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು.

ಶಿಕ್ಷಕ ಚಿನ್ಮಯಾನಂದನನ್ನು ಬಂಧಿಸಿದ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಶಿಕ್ಷಕನನ್ನು ಸ್ಪಸ್ಪೆಂಡ್ ಮಾಡಲಾಗಿದೆ.

*Good News for weavers*

 

*ದಸರಾ ಆನೆ ಮೇಲೆ ಗುಂಡಿನ ದಾಳಿ; ಆರೋಪಿ ಅರೆಸ್ಟ್*

https://pragati.taskdun.com/mysore-dasara-elephantbalaramafiringaccused-arrested/

Related Articles

Back to top button