
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೂಲಿ ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆಯಾಗಿರುವ ಘಟನೆ ಬೆಳಗಾವಿಯ ಕಟಕೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
30 ವರ್ಷದ ಸರಸ್ವತಿ ನಾಪತ್ತೆಯಾಗಿರುವ ಮಹಿಳೆ. ತಮ್ಮ ಮಗಳು ಆಗಸ್ಟ್ 29ರಂದು ಬೆಳಿಗ್ಗೆ 9:30ಕ್ಕೆ ಮನೆಯಿಂದ ಕೂಲಿ ಕೆಲಸಕೆಂದು ಹೋದವರು ವಾಪಸ್ ಮನೆಗೆ ಬಂದಿಲ್ಲ ಎಂದು ಸರಸ್ವತಿ ತಾಯಿ ಕಮಲವ್ವ ಕಟಕೋಳ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸರಸ್ವತಿ ವಯಸ್ಸು 30 ವರ್ಷ, 5 ಫೂಟ್ 4 ಇಂಚ್ ಎತ್ತರ, ಸಾದಾರಣ ಮೈಕಟ್ಟು ನೀಟಾದ ಮೂಗು, ದುಂಡು ಮುಖ, ಸಾದಾಗಪ್ಪು ಮೈ ಬಣ್ಣ, ನೀಲಿ ಬಣ್ಣದ ನೈಟಿ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾಳೆ.
ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಟಕೋಳ ಪೊಲೀಸ್ ಠಾಣೆಗೆ ಅಥವಾ ಕಟಕೋಳ ಪೊಲೀಸ್ ಠಾಣೆ ಫೋನ ನಂಬರ-08335-262133, ಮೊಬೈಲ್ ಸಂಖ್ಯೆ- 9480804081ನ್ನು ಸಂಪರ್ಕಿಸಬೇಕು ಎಂದು ಕಟಕೋಳ ಪೊಲೀಸ್ ಠಾಣೆಯ ಪಿ.ಎಸ್.ಹೆಚ್.ಓ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಲಸಕ್ಕೆಂದು ಹೋದ ವ್ಯಕ್ತಿ ಏಕಾಏಕಿ ನಾಪತ್ತೆ
https://pragati.taskdun.com/latest/belagavimanmissing/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ