ಗೋಕಾಕಲ್ಲಿ ಮತ್ತೊಂದು ಹೇಯ ಕೃತ್ಯ; ಸಹಚರರನ್ನು ಕಾವಲಿರಿಸಿ ಮಾಲೀಕನಿಂದಲೇ ಮಹಿಳೆ ಮೇಲೆ ಅತ್ಯಾಚಾರ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತೋಟದ ಕೆಲಸಕ್ಕೆಂದು ಬಂದಿದ್ದ ಮಹಿಳೆಯ ಮೇಲೆಯೇ ಮಾಲೀಕ ಅತ್ಯಾಚಾರವೆಸಗಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ನಲ್ಲಿ ಬೆಳಕಿಗೆ ಬಂದಿದೆ.
ಸೆ.17ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತೋಟದ ಕೆಲಸಕ್ಕೆಂದು ಬಂದಿದ್ದ ಸಂತ್ರಸ್ತೆ ಮಹಿಳೆ ಕುಟುಂಬ ಆರೋಪಿ ಮಾಲೀಕನ ಮನೆಯ ಎದುರು ಶೆಡ್ ನಿರ್ಮಿಸಿಕೊಂಡು ವಾಸವಾಗುತ್ತಿತ್ತು.
ಸೆ.17ರದು ಮಹಿಳೆಯ ಪತಿ ಹೊರಗೆ ಹೋಗಿದ್ದಾಗ ರಾತ್ರಿ ಶೆಡ್ ಬಳಿ ತನ್ನ ಸಹಚರರೊಂದಿಗೆ ಬಂದ ಮಾಲೀಕ, ಶೆಡ್ ಸುತ್ತ ತನ್ನ ಸಹಚರರನ್ನು ಕಾವಲಿರಿಸಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಹಿಳೆಯ 5 ವರ್ಷದ ಬಾಲಕನ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೇ ಅತ್ಯಾಚಾರ ಕೃತ್ಯದ ಬಗ್ಗೆ ಬಾಯ್ಬಿಡದಂತೆ ಜೀವ ಬೆದರಿಕೆಯೊಡ್ಡಿದ್ದಾನೆ.
ಪತಿ ಮನೆಗೆ ಬರುತ್ತಿದ್ದಂತೆ ಸಂತ್ರಸ್ತ ಮಹಿಳೆ ಗೋಕಾಕ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಪೊಲಿಸರು ಆರೋಪಿ ಮಾಲೀಕನನ್ನು ಬಂಧಿಸಿದ್ದಾರೆ.
ಕಗ್ಗಂಟಾದ ಮಹಾಂತ ನರೇಂದ್ರಗಿರಿ ಸಾವಿನ ಪ್ರಕರಣ; ಸಿಬಿಐಗೆ ವರ್ಗಾವಣೆ; ಮತ್ತೋರ್ವ ಆರೋಪಿ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ