
ಪ್ರಗತಿವಾಹಿನಿ ಸುದ್ದಿ: ಎತ್ತಿನ ಬಂಡಿ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಬಸವನ ಕುಡುಚಿ ಗ್ರಾಮದಲ್ಲಿ ನಡೆದಿದೆ.
27 ವರ್ಷದ ಅಪ್ಪಣ್ಣ ಪಾಟೀಲ್ ಮೃತ ಯುವಕ. ಸೋಮವಾರ ಬಸವಣ್ಣನ ಜಾತ್ರೆಯಲ್ಲಿ ಯುವಕನ ಮೇಲೆ ಎತ್ತಿನ ಬಂಡಿ ಹರಿದು ಅವಘಡ ಸಂಭವಿಸಿತ್ತು. ಯುವಕ ಗಂಭೀರವಾಗಿ ಗಾಯಗೊಂಡಿದ್ದ.
ಗಾಯಾಳುವನ್ನು ಬೆಳಗಾವಿ ಖಾಅಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾರೆ.