Kannada NewsKarnataka News

ಬೆಳಗಾವಿ : 18ರಲ್ಲಿ 11 ಕಾಂಗ್ರೆಸ್, 7 ಬಿಜೆಪಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ 18 ವಿಧಾನ ಸಭಾ ಕ್ಷೇತ್ರಗಳ ಪೈಕಿ 11ರಲ್ಲಿ ಕಾಂಗ್ರೆಸ್ ಗೆಲುವಿನತ್ತ ಮುನ್ನಡೆದಿದ್ದು, 7ರಲ್ಲಿ ಬಿಜೆಪಿ ಮುಂದಿದೆ.

ಈಗಾಗಲೆ ಹಲವು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು, ಇನ್ನೂ ಕೆಲವು ಮತ ಎಣಿಕೆ ಮುಂದುವರಿದಿದೆ. ಅಥಣಿ, ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ, ಸವದತ್ತಿ, ಕಿತ್ತೂರು, ರಾಮದುರ್ಗ, ಕಾಗವಾಡ, ಚಿಕ್ಕೋಡಿ, ಯಮಕನಮರಡಿ, ಬೈಲಹೊಂಗಲ ಹಾಗೂ ಕುಡಚಿಯಲ್ಲಿ ಕಾಂಗ್ರೆಸ್ ಗೆಲುವು ಖಚಿತವಾಗಿದೆ.

ಬೆಳಗಾವಿ ದಕ್ಷಿಣ, ಖಾನಾಪುರ, ಗೋಕಾಕ, ಅರಬಾವಿ, ಹುಕ್ಕೇರಿ, ನಿಪ್ಪಾಣಿ, ರಾಯಬಾಗಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಚಿಕ್ಕೋಡಿಯಲ್ಲಿ ಗಣೇಶ ಹುಕ್ಕೇರಿ 72 ಸಾವಿರ ಮತಗಳ ಅಂತರದಿಂದ ಬಿಜೆಪಿಯ ರಮೇಶ ಕತ್ತಿ ಅವರನ್ನು ಸೋಲಿಸಿ ಜಿಲ್ಲೆಯಲ್ಲೇ ಅತ್ಯಧಿಕ ಅಂತರದ ಗೆಲುವು ದಾಖಲಿಸಿದ್ದಾರೆ.

Home add -Advt

Related Articles

Back to top button