ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶನಿವಾರ ಬೆಳಗಾವಿ ಉತ್ತರ ಕ್ಷೇತ್ರದ ವಿಧಾನ ಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಮುಸ್ಲಿಂ ಯುವಕರ ವಿರುದ್ಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಇನಸ್ಪೆಕ್ಟರ್ ದಯಾನಂದ ಶೇಗುಣಶಿ ಶನಿವಾರ ರಾತ್ರಿ 8.30ಕ್ಕೆ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣದ ಪೂರ್ಣ ವಿವರ ಹೀಗಿದೆ:
ದಿನಾಂಕ: 13-05-2023 ರಂದು 20-30 ಗಂಟೆಗೆ ದಯಾನಂದ ಜಿ. ಶೇಗುಣಸಿ, ಮೊಲೀಸ್ ಇನ್ಸಪೆಕ್ಟರ ತಿಲಕವಾಡಿ ಪೊಲೀಸ ಠಾಣಿ ಬೆಳಗಾವಿ ನಗರ, ರವರು ಸ್ವತ: ಫಿರ್ಯಾದಿ ನೀಡಿದ್ದರಲ್ಲಿ ದಿನಾಂಕ: 13-05-2023 ರಂದು ಕರ್ನಾಟಕ ರಾಜ್ಯ ವಿಧಾನ ಸಭೆ ಸಾರ್ವತ್ರಿಕ ಚುನಾವಣೆಯ ಫಲತಾಂಶದ ಮತ ಎಣಿಕೆ ಪ್ರಕ್ರೀಯೆಯು ನಮ್ಮ ಪೊಲೀಸ್ ಠಾಣೆಯ ಹದ್ದಿಯ ತಿಲಕವಾಡಿ ಆರ್ಪಿಡಿ ಕಾಲೇಜದಲ್ಲಿ ಇದ್ದುದ್ದರಿಂದ ಇದರ ಬಂದೋಬಸ್ತ್ ಕರ್ತವ್ಯ ಕುರಿತು ನಾವು ಮತ್ತು ಸಿಬ್ಬಂದಿ ಜನರು ಕೂಡಿಕೊಂಡು ಬಂದೋಬಸ್ತಿ ಕರ್ತವ್ಯದಲ್ಲಿ ಇದ್ದೆವು.
ನಾವು ಮತ್ತು ಇತರೆ ಸಿಬ್ಬಂದಿ ಜನರು ಕೂಡಿಕೊಂಡು ಆರ್ಪಿಡಿ ಕ್ರಾಸ್ ದಲ್ಲಿ ಬ್ಯಾರಿಕೇಡ್ ಹತ್ತಿರ ಕರ್ತವ್ಯದ ಮೇಲೆ ಇದ್ದಾಗ ಮಧ್ಯಾಹ್ನ 2-30 ಗಂಟೆಯ ಸುಮಾರಿಗೆ ಮತ ಎಣಿಕೆ ನಡೆಯುತ್ತಿದ್ದಾಗ ಬೆಳಗಾವಿ ಜಿಲ್ಲೆಯ ವಿವಿಧ ಮತಕ್ಷೇತ್ರದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದಾಗ ಅಲ್ಲಿ ಕೂಡಿದ್ದ ಜನರು ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಘೋಷಣೆ ಕೂಗುತ್ತಾ ಸಂಭ್ರಮಾಚರಣೆ ಮಾಡುತ್ತಿದ್ದರು. ಆ ಕಾಲಕ್ಕೆ ಅಲ್ಲಿ ಸೇರಿದ್ದ ಸುಮಾರು ಮುಸ್ಲಿಂ ಹುಡುಗರು ಕಾಂಗ್ರೇಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದಾಗ ಅವರ ಪರವಾಗಿ ರಾಷ್ಟ್ರೀಯ ಸಮಗ್ರತೆಗೆ ಭಾದಕವಾಗುವ ಮತ್ತು ಸಾರ್ವಭೌಮತ್ವಕ್ಕೆ ದಕ್ಕೆ ತರಲು ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿಸುವುದಕ್ಕಾಗಿ “ಜಿಂದಾಬಾದ್ ಜಿಂದಾಬಾದ್ ಪಾಕಿಸ್ಥಾನ ಜಿಂದಾಬಾದ್” ಅಂತಾ ಘೋಷಣೆ ಕೂಗಿ ಬೆಳಗಾವಿ ನಗರದಲ್ಲಿ ವರ್ಗ-ವರ್ಗಗಳ ನಡುವೆ ಮತೀಯ ಮೂಲವಂಶೀಯ ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳ ನಡುವೆ ದ್ವೇಷ ಭಾವನೆಯನ್ನುಂಟು ಮಾಡಿ ಕೋಮು ಸೌಹಾರ್ಧತೆ ವಿಚಲಿತಗೊಳಸುವ ಉದ್ದೇಶದಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯ ಪರವಾಗಿ “ಜಿಂದಾಬಾದ್ ಜಂದಾಬಾದ್ ಪಾಕಿಸ್ಥಾನ ಜಿಂದಾಬಾದ್” ಅಂತಾ ಘೋಷಣೆ ಕೂಗಿದ್ದು ಸದರಿ ಆರೋಪಿತರ ಮೇಲೆ ನಮ್ಮದು ಕಲಂ: 153, 153(ಎ) ಐಪಿಸಿ ಅಡಿಯಲ್ಲಿ ಸತ ಫಿರ್ಯಾದಿ ಇರುತ್ತದೆ ಅಂತಾ ನಮೂದ ಇದ್ದ ಫಿರ್ಯಾದವನ್ನು ಸ್ವೀಕರಿಸಿಕೊಂಡು ಅದನ್ನು ತಿಲಕವಾಡಿ ಪಿಎಸ್ ಅಪರಾದ ಸಂಖ್ಯೆ: 57/2023 ಕಲಂ: 153, 153 (ಬಿ) ಐ.ಪಿ.ಸಿ ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಈ ಮಧ್ಯೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ನೂತನ ಶಾಸಕ ಆಸಿಫ್ (ರಾಜು ) ಸೇಠ್, ಇದು ಬಿಜೆಪಿಯವರು ತಿರುಚಿ ಮಾಡಿರುವ ವಿಡೀಯೋ ಆಗಿದ್ದು, ಅವರ ವಿರುದ್ಧ ತನಿಖೆ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ. ಆದರೆ, ಸ್ಥಳದಲ್ಲೇ ಇದ್ದ ಪೊಲೀಸ್ ಅಧಿಕಾರಿ ಸ್ವತಃ ಪ್ರಕರಣ ದಾಖಲಿಸಿರುವುದರಿಂದ ಪ್ರಕರಣ ಗಂಭೀರತೆ ಪಡೆದಿದೆ.
ನೂತನ ಶಾಸಕ ಆಸೀಫ್ ಸೇಠ್ ಇಂತಹ ದೇಶದ್ರೋಹಿಗಳ ರಕ್ಷಣೆಗೆ ಮುಂದಾಗಬಾರದೆನ್ನುವ ಆಗ್ರಹ ಕೇಳಿ ಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ