Kannada NewsKarnataka News

ಬೆಳಗಾವಿ: ಪತ್ನಿಯ ಸೀಮಂತಕ್ಕೆಂದು ರಜೆಯ ಮೇಲೆ ಹೊರಟಿದ್ದ ಯೋಧ ಅಪಘಾತಕ್ಕೆ ಬಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪತ್ನಿಯ ಸೀಮಂತಕ್ಕೆಂದು ರಜೆಯ ಮೇಲೆ ತೆರಳುತ್ತಿದ್ದ ಯೋಧ ಅಪಘಾತಕ್ಕೆ ಬಲಿಯಾಗಿದ್ದಾನೆ.

ಸವದತ್ತಿ ತಾಲೂಕಿನ ಹೊಸೂರು ಗ್ರಾಮದ ಪ್ರಕಾಶ ಸಂಗೊಳ್ಳಿ ( 29) ಮೃತ ಯೋಧ. ಬೆಳಗಾವಿಯ ಎಂಎಲ್ಐಆರ್ ಸಿಯಲ್ಲಿ ಪ್ರಕಾಶ ಕೆಲಸ ಮಾಡುತ್ತಿದ್ದ.

ಭಾನುವಾರ ಪತ್ನಿಯ ಸೀಮಂತ ಕಾರ್ಯಕ್ರಮವಿತ್ತು. ಹಾಗಾಗಿ ರಜೆ ಹಾಕಿ ಊರಿಗೆ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಆತನ ದ್ವಿಚಕ್ರ ವಾಹನಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋಗಿದೆ. ಪ್ರಕಾಶ ಸ್ಥಳದಲ್ಲೇ ಸಾವಿಗೀಡಾದರು.

ಶುಕ್ರವಾರ ಬೆಳಗ್ಗೆ ಹೊಸೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಇಡೀ ಗ್ರಾಮ ಶೋಕ ಸಾಗರದಲ್ಲಿ ಮುಳುಗಿದೆ.

ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋನಿಯಾ ಗಾಂಧಿಗೆ ಕೊರೋನಾ: ಬಿಜೆಪಿ ವ್ಯಂಗ್ಯ; ಕಾಂಗ್ರೆಸ್ ತಿರುಗೇಟು

ಶಾಸಕ ಅನಿಲ್ ಬೆನಕೆ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

 

Related Articles

Back to top button