ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಜಯನಗರ -ಹಿಂಡಲಗಾದ ಶ್ರೇಯಸ್ ಚಂದ್ರಕಾಂತ್ ಕುಂಡೇಕರ್ ರಾಜಸ್ಥಾನದ ಉದಯಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಪಾಕಿಸ್ತಾನ ಮತ್ತು ಚೀನಾದ ಕರಾಟೆ ಪಟುಗಳು ಭಾಗವಹಿಸಿದ್ದರು. ೧೩ ವರ್ಷದೊಳಗಿನವರ ವಿಭಾಗದಲ್ಲಿ ಶ್ರೇಯಸ್ ಕುಂಡೇಕರ್ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾನೆ.
ಅಂಕಿ ಅಂಶಗಳ ಜೊತೆಗೆ, ಅವರು ಚಿನ್ನದ ಪದಕ, ಕಪ್ಪು ಬೆಲ್ಟ್ ಮತ್ತು ‘ಶೋಡನ್’ (ಮೊದಲ ಡ್ಯಾನ್) ಪದವಿಯನ್ನು ಪಡೆದಿದ್ದಾರೆ. ಇದಕ್ಕೂ ಮುನ್ನ ಸಾಂಗ್ಲಿಯಲ್ಲಿ ನಡೆದಿದ್ದ ಆಹ್ವಾನಿತ ಕರಾಟೆ ಸ್ಪರ್ಧೆಯಲ್ಲೂ ಚಿನ್ನದ ಪದಕ ಪಡೆದಿದ್ದರು.
ಕರಾಟೆ ತರಬೇತುದಾರರಾದ ಭರಮಾಣಿ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿದ್ದು, ವನಿತಾ ವಿದ್ಯಾಲಯದಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಏಷ್ಯನ್ ಕರಾಟೆ ಫೆಡರೇಶನ್ ಉದಯಪುರದಲ್ಲಿ ಸ್ಪರ್ಧೆಯನ್ನು ಆಯೋಜಿಸಿದ್ದು, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಿಂದ ಗುರುತಿಸಲ್ಪಟ್ಟ ಸಂಸ್ಥೆಯಾದ ಎಸ್‌ಕೆಎಸ್‌ಎ ಇಂಟರ್‌ನ್ಯಾಷನಲ್‌ನ ಅನುಮೋದನೆಯೊಂದಿಗೆ ಏಶಿಯನ್ ಕರಾಟೆ ಫೆಡರೇಶನ್ ಉದಯಪುರದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ