ಬೆಳಗಾವಿ: 2000 ರೂ. ನೋಟು ಬದಲಾಯಿಸಿಕೊಡುವುದಾಗಿ ವಂಚಿಸಿದ ಕಾನಸ್ಟೆಬಲ್ ಸೇರಿ ಮೂವರ ಬಂಧನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : 500 ರೂ ಮುಖಬೆಲೆಯ 5 ಲಕ್ಷ ರೂ. ನೀಡಿದರೆ 2000 ರೂ. ಮುಖ ಬೆಲೆಯ 6 ಲಕ್ಷ ರೂ. ನೀಡುವುದಾಗಿ ಹೇಳಿ ವಂಚಿಸಿದ ಮೀರಜ್ ಠಾಣೆ ಪೊಲೀಸ್ ಕಾನಸ್ಟೆಬಲ್ ಸೇರಿ ಮೂವರನ್ನು ಕಾಗವಾಡ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಪ್ರಮುಖ ಆರೋಪಿ ಹುಡುಕಾಟ ನಡೆಸಲಾಗುತ್ತಿದೆ.
ಮೀರಜ್ ನ ಸಮೀರ್ ಬೋಸ್ಲೆ ಎನ್ನುವವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಕಾಗವಾಡ ಠಾಣೆ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಅವರ ಬಳಿ ಇದ್ದ 500 ರೂ. ಮುಖಬೆಲೆಯ ಚಿಲ್ಡ್ರ್ನನ್ಸ್ ಬ್ಯಾಂಕ್ ನೋಟುಗಳ ಬಂಡಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಸ್ಲಂ ಮತ್ತು ಜಾಧವ ಎಂದು ತಮ್ಮನ್ನು ಪರಿಚಯಿಸಿಕೊಂಡ ವ್ಯಕ್ತಿಯಗಳು ಅಥಣಿ ತಾಲೂಕಿನ ಮಂಗಸೂಳಿ ದೇವಸ್ಥಾನದ ಬಳಿ ಕರೆಸಿಕೊಂಡು ತಮ್ಮಿಂದ 5 ಲಕ್ಷ ರೂ. ಪಡೆದು ನಂತರ ಪೊಲೀಸರು ಬಂದರೆಂದು ಹೇಳಿ ಓಡಿ ಹೋಗಿ ಮೋಸ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು.
ಈ ಕುರಿತು ತಕ್ಷಣ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಾಗಿ ಶೋಧ ನಡೆದಿದ್ದು, ತನಿಖೆ ಮುಂದುವರಿದಿದೆ.
ವಿವರ:
FIR ಮತ್ತು ದೂರಿನ ಪ್ರತಿ ಇಲ್ಲಿದೆ:
https://pragati.taskdun.com/gangster-chhota-rajan-moved-court-against-scoop-web-series/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ