Belagavi NewsBelgaum NewsKannada NewsKarnataka News

*ಬೆಳಗಾವಿ ಪಾಲಿಕೆಯಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಸನ್-2025-26 ನೇ ಸಾಲಿನ ಪಾಲಿಕೆ ಅನುದಾನದ ಶೇ 24.10, ಶೇ 7.25 ಹಾಗೂ ಶೇ. 5 ರ ಯೋಜನೆಯಡಿಲ್ಲಿ ವಿವಿಧ ಯೋಜನೆಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಆಸಕ್ತ ಫಲಾನುಭವಿಗಳು ನವೆಂಬರ, 24, 2025 ರ ಒಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನ ಕೋಶದಲ್ಲಿ ಅರ್ಜಿ ಸಲ್ಲಿಸಲಬಹುದಾಗಿದೆ. ಸಣ್ಣ ಉದ್ದಿಮೆದಾರರಿಗೆ ಸಹಾಯಧನ ಕಾರ್ಯಕ್ರಮ ಪ.ಜಾ/ಪ.ಪಂ, ವಿಕಲಚೇತನ ಹಾಗೂ ಇತರೆ ಬಡ ವರ್ಗದವರಿಗೆ, ರಾಜ್ಯ/ರಾಷ್ಟ್ರೀಯ/ಅಂತರಾಷ್ಟ್ರೀಯ ಮಟ್ಟದ ಕ್ರೀಡೆ/ಕಲೆ/ಸಾಂಸ್ಕೃತಿಕ ಹಾಗೂ ಇತರೆ ವ್ಯಾಸಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಪ.ಜಾ/ಪ.ಪಂ, ವಿಕಲಚೇತನ ಹಾಗೂ ಇತರೆ ಬಡ ವರ್ಗದವರಿಗೆ ಮತ್ತು ಗಾಲಿ ಕುರ್ಚಿ (ವೀಲ್ ಚೇರ) ವಿಕಲಚೇತನರಿಗಾಗಿ ಮಾತ್ರ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಗರ ಬಡತನ ನಿರ್ಮೂಲನಾ ಕೋಶದ ಅಧಿಕಾರಿಗಳು/ಸಿಬ್ಬಂದಿಗಳನ್ನು ಹಾಗೂ ಮಹಾನಗರ ಪಾಲಿಕೆಯ ವೆಬ್ ಸೈಟನಲ್ಲಿ www.belagavicity.mrc.gov.in ಗೆ ಭೇಟಿ ನೀಡಬಹುದಾಗಿದೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button