Belagavi NewsBelgaum NewsKannada NewsKarnataka NewsLatest

ಬೆಳಗಾವಿ: ಡಬಲ್ ಮರ್ಡರ್; ಆರೋಪಿ ಆರೆಸ್ಟ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋಕಾಕ ತಾಲೂಕಿನ ಅಕ್ಕತಂಗೇರಹಾಳದಲ್ಲಿ ಜೋಡಿ ಕೊಲೆ ನಡೆದಿದೆ.

ಮಂಗಳವಾರ ಮಧ್ಯಾಹ್ನ ಈ ಭೀಕರ ಘಟನೆ ನಡೆದಿದೆ. ಮಲ್ಲಿಕಾರ್ಜುನ ಜಗದಾರ್ (40) ಮತ್ತು ರೇಣುಕಾ ಮಾಳಗಿ (42) ಕೊಲೆಯಾದವರು.

ರೇಣುಕಾಳ ಪತಿ ಯಲ್ಲಪ್ಪ ಮಾಳಗಿ (45) ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಪತ್ನಿಯನ್ನು ಕೊಲೆ ಮಾಡಿದ ಯಲ್ಲಪ್ಪ, ಮಲ್ಲಿಕಾರ್ಜುನನ ಮನೆ ಎದುರು ಆತನನ್ನು ಮರ್ಡರ್ ಮಾಡಿದ್ದಾನೆ.

ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ತನಿಖೆ ಮುಂದುವರಿದಿದೆ.

Home add -Advt

Related Articles

Back to top button