Kannada NewsKarnataka NewsLatest

ಪೊಲೀಸರ ಲಘು ಲಾಠಿ ಪ್ರಹಾರಕ್ಕೆ ಕಾರಣವಾಯಿತು ಬಸ್ ನಲ್ಲಿ ಸೀಟ್ ಗಾಗಿ ಮಹಿಳೆಯರ ಕಿತ್ತಾಟ

ಪ್ರಗತಿವಾಹಿನಿ ಸುದ್ದಿ, ಕೋಲಾರ: ಬೆಂಗಳೂರಿಗೆ ಹೋಗುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಸೀಟು ಹಿಡಿಯಲು ಮಹಿಳೆಯರಿಬ್ಬರು ನಡೆಸಿದ ಕಿತ್ತಾಟ ವಿಕೋಪಕ್ಕೆ ಹೋಗಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡುವ ಪ್ರಸಂಗದವರೆಗೂ ತಲುಪಿದೆ.

ಪ್ರಯಾಣಿಕರ ದಟ್ಟಣೆಯಿಂದ ತುಂಬಿದ್ದ ಬಸ್ ನಲ್ಲಿ ಸೀಟು ಹಿಡಿಯಲು ಮೊದಲು ಮಹಿಳೆಯೊಬ್ಬರು ಕಿಟಕಿಯಿಂದ ಬ್ಯಾಗ್ ತೂರಿದರು. ಅವರು ಬ್ಯಾಗ್ ಹಾಕಿದ್ದ ಸೀಟ್ ನಲ್ಲಿ ಬೇರೊಬ್ಬ ಮಹಿಳೆ ಬಂದು ಕುಳಿತಾಗ ಬ್ಯಾಗ್ ಹಾಕಿದ ಮಹಿಳೆ ಆಕ್ಷೇಪಿಸಿದರು. ಇದು ಕಿತ್ತಾಟಕ್ಕೆ ಕಿಡಿ ಹೊತ್ತಿಕೊಂಡಂತಾಯಿತು.

ಇಬ್ಬರೂ ಮಹಿಳೆಯರ ವಾಗ್ವಾದ ಹದ್ದುಮೀರಿ ಈ ಪೈಕಿ ಒಬ್ಬ ಮಹಿಳೆ ತನ್ನ ಸಂಬಂಧಿಕರಿಗೆ ಮೊಬೈಲ್ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಆ ಮಹಿಳೆ ಕಡೆಯವರು ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್ ಅಡ್ಡಗಟ್ಟಿ ಗಲಾಟೆ ಆರಂಭಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಸಿಪಿಐ ಹರೀಶ ಹಾಗೂ ಪೊಲೀಸ್ ಸಿಬ್ಬಂದಿ ಗಲಾಟೆ ಮಾಡುತ್ತಿರುವವರನ್ನು ನಿಯಂತ್ರಿಸಲು ಲಾಠಿ ಬೀಸಬೇಕಾಯಿತು. ಅಲ್ಲಿಗೆ ಪ್ರಮೀಳಾ ಕದನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಮಹಿಳೆ ಪರ ಬಂದು ಗಲಾಟೆ ಮಾಡಿದ ಇಬ್ಬರನ್ನು ಠಾಣೆಗೆ ಕರೆದೊಯ್ದು ಕೇಸು ದಾಖಲಿಸಲಾಗಿದೆ.

Related Articles

Back to top button