Kannada NewsLatest

ಸಿಗರೇಟ್ ಸೇದಿ ಅತಿಥಿಗಳ ಮೇಲೆ ಉಂಗುರ ಆಕಾರದ ಹೊಗೆ ಬಿಟ್ಟವಧುವಿನ ತಾಯಿ; ಮದುವೆಯನ್ನೇ ನಿಲ್ಲಿಸಿದ ವರ

ಪ್ರಗತಿವಾಹಿನಿ ಸುದ್ದಿ, ಲಕ್ನೋ: ಮದುವೆಗೆ ಬಂದ ಅತಿಥಿಗಳ ಮೇಲೆ ವಧುವಿನ ತಾಯಿ ಸಿಗರೇಟ್ ಸೇರಿ ಉಂಗುರಾಕಾರದ ಹೊಗೆ ಬಿಟ್ಟಿದ್ದಕ್ಕೆ ಸಿಟ್ಟಿಗೆದ್ದ ವರ ಮದುವೆಗೇ ಹೊಗೆ ಹಾಕಿದ್ದಾನೆ.

ಈ ಘಟನೆ ಉತ್ತರ ಪ್ರದೇಶದ ಸಂಭಾಲ್ ನಲ್ಲಿ ನಡೆದಿದೆ. ವಧುವಿನ ತಾಯಿ ಮದುವೆಗೆ ಬಂದ ಅತಿಥಿಗಳ ಮುಖಕ್ಕೆ ಸಿಗರೇಟ್ ಸೇದಿ ಹೊಗೆಯ ಉಂಗುರಗಳನ್ನು ಬಿಡುತ್ತಿದ್ದಳು ಎಂಬುದು ವರನ ಕಡೆಯವರ ಆರೋಪ.

Home add -Advt

ವರನ ಕುಟುಂಬದ ಪ್ರಕಾರ, ಅವರು ಮದುವೆ ಸ್ಥಳಕ್ಕೆ ಆಗಮಿಸಿದಾಗ ಎಲ್ಲರಿಗೂ ಆತ್ಮೀಯ ಸ್ವಾಗತವನ್ನು ನೀಡಲಾಯಿತು. ಆದರೆ ಸ್ವಲ್ಪ ಸಮಯದ ನಂತರ, ಅಮಲೇರಿದ ಸ್ಥಿತಿಯಲ್ಲಿ ಕಾಣಿಸಿಕೊಂಡ ವಧುವಿನ ತಾಯಿ ಎರ್ರಾಬಿರ್ರಿ ನರ್ತಿಸುತ್ತ ಅತಿಥಿಗಳ ಮುಖಕ್ಕೆ ಸಿಗರೇಟ್ ಹೊಗೆಯ ಉಂಗುರಗಳನ್ನು ಊದಿದಳು. ಇಷ್ಟೇ ಅಲ್ಲ, ವಧು ಕೂಡ ಮದುವೆಗೆ ಬಂದ ಅತಿಥಿಗಳನ್ನು ಖುಲ್ಲಂಖುಲ್ಲಾ ಚುಂಬಿಸುತ್ತಿದ್ದಳು ಎನ್ನಲಾಗಿದೆ.

ಇದನ್ನು ಕಂಡು ಘಾಸಿಗೊಂಡ ವರನ ಕಡೆಯವರು ಆಕ್ಷೇಪವೆತ್ತಿದ್ದು, ವರ ತನ್ನ ಮದುವೆಯನ್ನೇ ರದ್ದುಗೊಳಿಸಿದ್ದಾನೆ. “ನನ್ನ ಮಗ ಮದುವೆಗೆ ನಿರಾಕರಿಸಿರುವುದಕ್ಕೆ ವಧು ಮತ್ತು ಆಕೆಯ ತಾಯಿ ತೋರಿದ ಕೊಳಕು ವರ್ತನೆಯೇ ಕಾರಣ” ಎಂದು ವರನ ತಂದೆ ಹೇಳಿದ್ದಾರೆ.

Related Articles

Back to top button