
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮಂಗಳವಾರ ಅಥವಾ ಬುಧವಾರ ಘೋಷಣೆಯಾಗುವ ಸಾಧ್ಯತೆ ಇದೆ.
ಚುನಾವಣೆ ಆಯೋಗ ನಡೆಸುತ್ತಿರುವ ಸಿದ್ಧತೆಯನ್ನು ಗಮನಿಸಿದರೆ ಇನ್ನೆರಡು ದಿನದಲ್ಲೇ ದಿನಾಂಕ ಘೋಷಣೆಯಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ.
ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸುರೇಶ ಅಂಗಡಿ ಸೆಪ್ಟಂಬರ್ 23ರಂದು ನಿಧನರಾಗಿದ್ದಾರೆ. ಅಲ್ಲಿಂದ 6 ತಿಂಗಳಲ್ಲಿ ಉಪಚುನಾವಣೆ ಪ್ರಕ್ರಿಯೆಗಳೆಲ್ಲ ಮುಗಿಯಬೇಕು ಎನ್ನುವುದು ನಿಯಮ. ಹಾಗಾಗಿ ಮಾರ್ಚ್ 23ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಅದಕ್ಕೆ ಇನ್ನಿರುವುದು ಹೆಚ್ಚುಕಡಿಮೆ 44 ದಿನ. ಹಾಗಾಗಿ ಇನ್ನು ಒಂದೆರಡು ದಿನದಲ್ಲಿ ಚುನಾವಣೆ ದಿನಾಂಕವನ್ನು ಚುನಾವಣೆ ಆಯೋಗ ಘೋಷಿಸಬಹುದು.
ಚುನಾವಣೆ ಆಯೋಗದ ಪ್ರತಿನಿಧಿಗಳು ಸೋಮವಾರ ಜಿಲ್ಲೆಗೆ ಭೇಟಿ ನೀಡಿದ್ದರು. ಜಿಲ್ಲೆಯಲ್ಲಿ ಚುನಾವಣೆಗೆ ನಡೆದಿರುವ ಸಿದ್ದತೆಗಳ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಜಿಲ್ಲೆಯ ಅಧಿಕಾರಿಗಳು ಮತಗಟ್ಟೆ ಕೇಂದ್ರ ಸ್ಥಾಪಿಸಬೇಕಾದ ಶಾಲೆಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಿಜೆಪಿ ಸಂಭವನೀಯ ಅಭ್ಯರ್ಥಿ ಮಹಾಂತೇಶ ಕವಟಗಿಮಠ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ