*ಮನೆಗಳ್ಳತನ ಮಾಡುತ್ತಿದ್ದ ಐವರನ್ನು ಅರೆಸ್ಟ್ ಮಾಡಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಅಮನ ನಗರ, ಉಜ್ವಲ ನಗರ, ಮಾರುತಿ ನಗರ, ಶಾಹೂ ನಗರ, ಹಾಗೂ ವೀರಭದ್ರ ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಐವರನ್ನು ಬೆಳಗಾವಿಯ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ಮನೆಯ ಕೀಲಿಯನ್ನು ಮುರಿದು ಮನೆಯಲ್ಲಿ ಇಟ್ಟಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳಾದ ರಿಹಾನ್ ಮೈನುದ್ದೀನ ಧಫೇದಾರ @ ಪಠಾಣ (18), ಮಲೀಕ ಖಲೀಲ ಹುಬ್ಬಳ್ಳಿ (26), ಅರಮಾನ ಅಕ್ಷರ ಶೇಖ (18) ಕಳ್ಳತನ ಮಾಡುತ್ತಿದ್ದ ಆರೋಪಿಗಳು
ಕಳ್ಳತನದ ಮಾಡಿದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದ ಆರೋಪಿತರಾದ ಖಲೀಲ ಇಸ್ಮಾಯಿಲ್ ಹುಬ್ಬಳ್ಳಿ (57) ಹಾಗೂ ಶಾನವಾಜ ಸಿರಾಜುದ್ದೀನ ಪಠಾಣ (23) ಅವರನ್ನು ಬಂಧಿಸಿ ಸುಮಾರು 64,47,690 ರೂ ಬೆಲೆಯ 415.98 ಗ್ರಾಂ ಬಂಗಾರದ ಆಭರಣಗಳು ಹಾಗೂ ಸುಮಾರು 3,45,735 ರೂ ಬೆಲೆಯ 1329.75 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 67,93,425 ರೂ ಬೆಲೆಯ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ
ಪ್ರಕರಣದ ಕಾರ್ಯಾಚರಣೆಯಲ್ಲಿ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಬಿ.ಆರ್.ಗಡ್ಡಕರ ಪಿಎಸ್ಐಗಳಾದ ಹೊನ್ನಪ್ಪ ತಳವಾರ, ಶ್ರೀಶೈಲ್ ಹುಳಗೇರಿ, ಉದಯ ಪಾಟೀಲ, ಪಿ.ಎಮ್. ಮೋಹಿತೆ ಮತ್ತು ಸಿಬ್ಬಂದಿಗಳಾದ ಬಿ.ಎಫ್. ಬಸ್ತವಾಡ, ಅರುಣ ಕಾಂಬಳೆ, ಎಮ್.ಜಿ. ಕುರೇರ, ಜಗನ್ನಾಥ, ಭೋಸಲೆ, ಬಿ.ಎಮ್ ಕಲ್ಲಪ್ಪನವರ ಸಿ.ಜೆ.ಚಿನ್ನಪ್ಪಗೋಳ, ಕೆ.ಬಿ.ಗೌರಾಣಿ,ಸಿ.ಐ.ಚಿಗರಿ, ಮಹೇಶ ಒಡೆಯರ, ಮಲ್ಲಿಕಾರ್ಜುನ ಗಾಡವಿ, ದೇವರಡ್ಡಿ ಹೆಬ್ಬಾಳ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಜನರಾದ ರಮೇಶ ಅಕ್ಕಿ, ಮಹಾದೇವ ಕಾಸೀದ, ಹಾಗೂ ಬೆರಳು ಮುದ್ರೆ ವಿಭಾಗದ ಇನ್ಸಪೆಕ್ಟರ ಆನಂದ ಮೇತ್ರಿ, ಬಾಹುಬಲಿ ಅನಗಾಲೆ, ವಿಶ್ವನಾಥ ಮಠಪತಿ, ಸೋಮಶೇಖರ, ಸಂತೋಷ ಅವರ ಕಾರ್ಯಕ್ಕೆ ಪೊಲೀಸ್ ಆಯುಕ್ತರು ಬೆಳಗಾವಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


