ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಅಮನ ನಗರನಲ್ಲಿ ಜ.19 ರಂದು ರಾತ್ರಿ ವೇಳೆ ನಡೆದಿದ್ದ ಕಳ್ಳತನ ಪ್ರಕರಣದ ಇಬ್ಬರು ಆರೋಪಿಗಳನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಫರ್ಹಾನ ರಿಯಾಜ ಅಹ್ಮದ ದಾಲಾಯತ (22) ಮತ್ತು ಕಳ್ಳತನ ಮಾಡಿದ ಬಂಗಾರದ ಆಭರಣಗಳನ್ನು ಇಟ್ಟುಕೊಂಡಿದ್ದ ಆರೋಪಿ ಜುಬೇರ ಅಹ್ಮದ ಅಬ್ದುಲರಸೀದ ದಾಲಾಯತ (25) ಈ ಇಬ್ಬರನ್ನು ಬಂಧಿಸಿ ಸುಮಾರು 7,50,000/- ರೂ ಬೆಲೆಯ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರಪಡಿಸಿ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.
ಅಲ್ಲದೇ ಈ ಪ್ರಕರಣ ಆರೋಪಿ ಫರ್ಹಾನ ರಿಯಾಜಅಹ್ಮದ ದಾಲಾಯತ ಈ ಹಿಂದೆ 2024 ನೇ ಸಾಲಿನಲ್ಲಿ ನಡೆದ ಕಳ್ಳತನ ಮತ್ತು ಮನೆಗಳ್ಳತನ ಪ್ರಕರಣದಲ್ಲಿ ಹಾಗೂ ಗಾಂಜಾ ಸೇವನೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಪ್ರಕರಣದ ಇನ್ನೋರ್ವ ಆರೋಪಿ ಜುಬೇರ ಅಹ್ಮದ ಅಬ್ದುಲರಸೀದ ದಾಲಾಯತ 2021 ರಲ್ಲಿ ನಡೆದ ರಾಬರಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬುದು ತಿಳಿದು ಬಂದಿದೆ.
ಪ್ರಕರಣದ ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಹೊನ್ನಪ್ಪ ತಳವಾರ ಶ್ರೀಶೈಲ್ ಹುಳಗೇರಿ, ಉದಯ ಪಾಟೀಲ, ಮತ್ತು ಸಿಬ್ಬಂದಿಗಳಾ ಎಮ್.ಜಿ.ಕುರೇರ, ಸಿ.ಜೆ.ಚಿನ್ನಪ್ಪಗೋಳ, ಬಿ.ಎಫ್.ಬಸ್ತವಾಡ, ಜಗನ್ನಾಥ ಭೋಸಲೆ, ಬಸವರಾಜ ಕಲ್ಲಪ್ಪನವರ, ಸಿ.ಐ.ಚಿಗರಿ, ಕೆ.ಬಿ.ಗೌರಾಣಿ, ಮಲ್ಲಿಕಾರ್ಜುನ ಗಾಡವಿ, ಮಹೇಶ ಒಡೆಯರ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾ ರಮೇಶ ಅಕ್ಕಿ, ಮಹಾದೇವ ಕಾಸೀದ ಮತ್ತು ಬೆರಳು ಮುದ್ರೆ ತಜ್ಞರಾದ ವಿಶ್ವನಾಥ ಮಠಪತಿ, ಬಾಹುಬಲಿ ಅಲಗಾಲೆ, ಸಂತೋಷ ಮನಕಾಪೂರೆ, ರುದ್ರಯ್ಯಾ ಹಿರೇಮಠ ಮತ್ತು ಸೋಕೋ ಅಧಿಕಾರಿಯವರಾದ ಹರೀಶ ಯಡ್ರಾವಿ ಇವರು ಕೆಲಸ ಮಾಡಿದ್ದು, ಇವರ ಕೆಲಸಕ್ಕೆ ಪೊಲೀಸ್ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ