Belagavi NewsBelgaum NewsKannada NewsKarnataka News

*ಮಕ್ಕಳ ಮಾರಾಟ ಜಾಲ ಭೇದಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಕೇವಲ 30 ದಿನದ ಹೆಣ್ಣು ಮಗುವನ್ನು ಮಾರಾಟಕ್ಕೆ ಯತ್ನಿಸಿರು ಮಗು ಮಾರಟ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

ಮಗುವನ್ನು ಮಾರಾಠ ಮಾಡಲು ಯತ್ನಿಸಿದ ವೇಳೆ ಐವರನ್ನು ಪೊಲೀಸರು ಬಂಧಿಸಿದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿ ನಗರದಲ್ಲಿ ಮಗು ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದು, ಈ ಸಂಬಂಧ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜಕ ರಾಜಕುಮಾರ ಸಿಂಗಪ್ಪಾ ರಾಠೋಡ ದೂರಿನ ಮೇರೆಗೆ ಬೆಳಗಾವಿ ಮಾಳಮಾರುತಿ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಹಾದೇವಿ ಜೈನ್, ಅಬ್ದುಲಗಫಾರ ಲಾಡಖಾನ, ಚಂದನ ಸುಬೇದಾ‌ರ್, ಪವಿತ್ರಾ, ಪ್ರವೀಣ ಮಡಿವಾಳರ ಈ ಐವರು ಬಂಧಿತ ಆರೋಪಿಗಳಾಗಿದ್ದಾರೆ. ಮಗುವನ್ನ ವಶಕ್ಕೆ ಪಡೆದುಕೊಂಡ ಪೋಲಿಸರು ಜಿಲ್ಲಾಸ್ಪತ್ರೆಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ.

ಅಬ್ದುಲಗಫಾರ ಲಾಡಖಾನ ತಾ.ಸವದತ್ತಿ ಹಾಲಿ ಸೋಮವಾರ ಪೇಠ ಕಿತ್ತೂರ ಇವನಿಂದ 60,000ಕ್ಕೆ ಮಗು ಪಡೆದುಕೊಂಡಿದ್ದಾನೆ. ಬಳಿಕ ಬೆಳಗಾವಿಯಲ್ಲಿ ಆ ಮಗುವನ್ನ 1,40,000 ರೂಪಾಯಿ ಮಾರಾಟ ಮಾಡಲು ಯತ್ನಿಸಿದೆ. ಇನ್ನು ಈ ಜಾಲವನ್ನು ರಹಸ್ಯ ಕಾರ್ಯಾಚರಣೆ ಮೂಲಕ ಪೋಲಿಸರು ಭೇದಿಸಿ ಆರೋಪಿಗಳನ್ನು ಮಟ್ಟಹಾಕುವ ಕೆಲಸ ಮಾಡಿದ್ದಾರೆ.

ಪೋಲಿಸ್‌ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದಶ್, ಡಿಸಿಪಿ ಪಿ.ವಿ.ಸ್ನೇಹಾ, ಇನ್ಸ್‌ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ಇವರ ಮಾರ್ಗದರ್ಶನದಲ್ಲಿ ಸಬ್‌ಇನ್ಸ್‌ಪೆಕ್ಟರ ರಾಮಗೌಡ ಸಂಕನಾಳ ಸಿಬ್ಬಂದಿ ಕೆ.ಬಿ.ಗೌರಾಣಿ ಮತ್ತು ಜಾಸ್ಮಿನ ಮುಲ್ಲಾ ಈ ಕಾರ್ಯಾಚರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button