
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದಿಂದ ದೇಶದಲ್ಲೇ ಹೊಸ ದಾಖಲೆ ನಿರ್ಮಾಣವಾಗಲಿದೆ.
ನಾಲ್ವರು ಸ್ವಂತ ಸಹೋದರರು ಶಾಸಕರಾಗಿ ಆಯ್ಕೆಯಾಗುವ ಮೂಲಕ ಏಕಕಾಲದಲ್ಲಿ ವಿಧಾನಸೌಧದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ರಮೇಶ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಜೊತೆಗೆ ಇದೀಗ ಲಖನ್ ಜಾರಕಿಹೊಳಿ ಕೂಡ ವಿಧಾನಸೌಧದ ಮೆಟ್ಟಿಲೇರಲಿದ್ದಾರೆ. ಮೂವರು ವಿಧಾನಸಭೆಯ ಸದಸ್ಯರಾದರೆ ಲಖನ್ ವಿಧಾನ ಪರಿಷತ್ ಪ್ರವೇಶ ಪಡೆಯುತ್ತಿದ್ದಾರೆ.
ಸತೀಶ್ ಜಾರಕಿಹೊಳಿ ಕೂಡ ಆರಂಭದಲ್ಲಿ ವಿಧಾನ ಪರಿಷತ್ ಮೂಲಕವೇ ವಿಧಾನಸೌಧಕ್ಕೆ ಎಂಟ್ರಿ ಪಡೆದಿದ್ದರು.
ಬಹುಶಃ ಇಡೀ ದೇಶದಲ್ಲಿ ಬೇರೆಲ್ಲೂ ಈ ರೀತಿ ಏಕಕಾಲಕ್ಕೆ ನಾಲ್ವರು ಸಹೋದರರು ಶಾಸಕರಾಗಿ ಕೆಲಸ ಮಾಡುತ್ತಿರುವುದು ಇರಲಿಕ್ಕಿಲ್ಲ. ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಮೂಲಕ ಹೊಸದೊಂದು ದಾಖಲೆ ನಿರ್ಮಾಣವಾಗುವ ಲಕ್ಷಣ ಕಾಣುತ್ತಿದೆ.
ಬೆಳಗಾವಿಯಲ್ಲಿ ಚನ್ನರಾಜ ಹಟ್ಟಿಹೊಳಿ, ಲಖನ್ ಜಾರಕಿಹೊಳಿ ಜಯಭೇರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ