ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ; 1,75,000/ ರೂ ಮೌಲ್ಯದ ಬಂಗಾರ, ಬೆಳ್ಳಿಯ ಆಭರಣ & ಮೋಟರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.
ದಿನಾಂಕ.08-04-2022 ರಂದು ಬೆಳಗಾವಿ ಗ್ರಾಮೀಣ ಪೊಲೀಸ ಠಾಣಿ ವ್ಯಾಪ್ತಿಯ ತುರಮುರಿ ಗ್ರಾಮದ ಪರಶರಾಮ ಕೇದಾರಿ ಭಕ್ತಿಕರರವರ ಮನೆಯಲ್ಲಿ ಬಂಗಾರ ಹಾಗೂ ಬೆಳ್ಳಿಯ ಆಭರಣ ಕಳುವಾದ ಬಗ್ಗೆ ನೀಡಿದ ದೂರಿನಂತೆ ಬೆಳಗಾವಿ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದರು.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಇನಸ್ಪೆಕ್ಟರ್ ಶ್ರೀನಿವಾಸ ಹಾಂಡ ಇವರ ನೇತೃತ್ವದಲ್ಲಿ ಸಿಬ್ಬಂದಿ ತಂಡ ಆರೋಪಿಯ ಜಾಡು ಹಿಡಿದು ದಿನಾಂಕ. 26-05-2022 ರಂದು ಸಂಶಯಾಸ್ಪದ ರೀತಿಯಲ್ಲಿ ಮೋಟರ್ ಸೈಕಲ್ ಸಮೇತ ಸಿಕ್ಕಿದ್ದು ಅವರನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.
1) ಮಹೇಶ ಗುರುನಾಥ ಭಕ್ತಿಕರ (28) ಸಾ: ತುರಮುರಿ
2) ಆಕಾಶ ಅನಂತ ಡೋನಕರಿ (22) ಸಾ: ಮನ್ನೂರ
ಬಂಧಿತರು. ಅವರಿಂದ 1) 1,50,೦೦೦/- ರೂ ಮೌಲ್ಯದ 38 ಗ್ರಾಂ ಬಂಗಾರ ಹಾಗೂ ಬೆಳ್ಳಿಯ ಆಭರಣ 2) 25,000/- ರೂ ಮೌಲ್ಯದ ಬಜಾಜ ಪಲ್ಸರ ಮೋಟರ್ ಸೈಕಲ್ ಒಂದು ಹೀಗೆ ಒಟ್ಟು 1,75,000/- ಮೌಲ್ಯದ ಸ್ವತ್ತನ್ನು ಜಪ್ತ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿತರನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ತಂಡವನ್ನು ಪೊಲೀಸ ಆಯುಕ್ತರು ಹಾಗೂ ಉಪ ಆಯುಕ್ತರುಗಳು ಶ್ಲಾಘಿಸಿದ್ದಾರೆ.
ಬೆಳಗಾವಿ ಪೊಲೀಸರ ಭರ್ಜರಿ ಭೇಟೆ: ಮೂವರು ಮನೆಗಳ್ಳರ ಬಂಧನ; 19.47 ಲಕ್ಷ ರೂ. ಮೌಲ್ಯದ ವಸ್ತುಗಳ ವಶ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ