ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ಬೆಳಗಾವಿಯ ಪ್ರಿಯಾಂಕಾ ಕುಲಕರ್ಣಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ತರುವ ಮೂಲಕ ಹೆಮ್ಮೆ ಮೂಡಿಸಿದ್ದಾರೆ.
ಕೆಎಲ್ ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕಾ ಶೇ. 98.6 ಅಂಕಗಳನ್ನು ಗಳಿಸಿದ್ದಾಳೆ. ಒಟ್ಟಿ 592 ಅಂಕಗಳನ್ನು ಗಳಿಸಿದ್ದು ಭೂಗೋಳಶಾಸ್ತ್ರದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾಳೆ.
ಮುಂದೆ ಜಿಲ್ಲಾಧಿಕಾರಿಯಾಗುವ ಕನಸು ಹೊಂದಿರುವ ಪ್ರಿಯಾಂಕಾ “ರ‍್ಯಾಂಕ್ ನಿರೀಕ್ಷಿಸಿರಲಿಲ್ಲ. ನಾನು ನಿತ್ಯ 3 ತಾಸು ಮಾತ್ರ ಓದುತ್ತಿದ್ದೆ. ಉಳಿದಂತೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತಿದ್ದೆ. ಕಾಲೇಜಿನ ಬೋಧಕರು, ಪಾಲಕರಿಂದ ಈ ಸಾಧನೆ ಸಾಧ್ಯವಾಯಿತು. ಈಗ ಯುಪಿಎಸ್ ಸಿ ಪರೀಕ್ಷೆ ಬರೆಯಬೇಕೆಂಬ ನಿರ್ಧಾರ ಮಾಡಿದ್ದೇನೆ.” ಎಂದು ತಮ್ಮ ಅನಿಸಿಕೆ ಹೇಳಿಕೊಂಡಿದ್ದಾರೆ.
“ಬಾಲ್ಯದಲ್ಲಿ ತಮ್ಮ ತಂದೆ ಬೆಳಗಾವಿ ಜಿಲ್ಲಾಧಿಕಾರಿ ನಿವಾಸ ತೋರಿಸಿದಾಗಿಂದ ನನಗೂ ಡಿಸಿ ಆಗುವ ಆಸೆ ಚಿಗುರಿತ್ತು” ಎಂದು ಪ್ರಿಯಾಂಕಾ ನೆನಪಿಸಿದಳು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ