Belagavi NewsBelgaum NewsKarnataka NewsTravel

*ಯಾತ್ರಿಕರಿಗೆ ಗುಡ್ ನ್ಯೂಸ್ ನೀಡಿದ ಬೆಳಗಾವಿ ಸಾರಿಗೆ ಇಲಾಖೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 2025 ನೇ ಸಾಲಿನ ಶ್ರೀ ಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಯ ಪ್ರಯುಕ್ತ ಅಥಣಿ, ರಾಯಭಾಗ , ಗೋಕಾಕ, ಹುಕ್ಕೇರಿ ಹಾಗೂ ಚಿಕ್ಕೋಡಿ, ಸಂಕೇಶ್ವರ, ನಿಪ್ಪಾಣಿ  ಘಟಕಗಳಿಂದ ಪ್ರಾಸಂಗಿಕ ಕರಾರಿನ ಮೇಲೆ ಹಾಗೂ ಹೆಚ್ಚುವರಿ ಸಾರಿಗೆಗೆ ಸುಸಜ್ಜಿತ ವಾಹನಗಳನ್ನು ಒದಗಿಸಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ

ಗೋಕಾಕ – ಶ್ರೀಶೈಲ ಮತ್ತು  ಅಥಣಿ – ಶ್ರೀಶೈಲ ಮಾರ್ಗದ ವಿಶೇಷ ಸಾರಿಗೆಗಳನ್ನು ಆನ್ ಲೈನ್ ಬುಕ್ಕಿಂಗಾಗಿ ಅವಕಾಶ ಕಲ್ಪಿಸಲಾಗಿದೆ.

ಯಾತ್ರಾರ್ಥಿಗಳು ಶ್ರೀ ಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದರ್ಶನದ ಜೊತೆಗೆ ಕೂಡಲಸಂಗಮ, ಬಾದಾಮಿ,  ಮಂತ್ರಾಲಯ , ಮಹಾನಂದಿ , ಬಸವಕಲ್ಯಾಣ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ.

ಪಾದ ಯಾತ್ರೆ ಹೋದಂತಹ ಭಕ್ತಾದಿಗಳಿಗೆ ಶ್ರೀಶೈಲದಿಂದ ಮರುಳಿ ಬರಲು ವಿಶೇಷ ವಾಹನಗಳ ಸೌಲಭ್ಯ ಒದಗಿಸಲಾಗಿದೆ.

Home add -Advt

ಯಾತ್ರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಚಿಕ್ಕೋಡಿ ವಿಭಾಗದ ವಾ.ಕ.ರ.ಸಾ.ಸಂಸ್ಥೆ ವಿಭಾಗಿಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button