Belagavi NewsBelgaum NewsKannada NewsKarnataka News

ಬೆಳಗಾವಿ: ಬಾಲಕಿ ಸೇರಿ ಇಬ್ಬರು ಅಪಘಾತಕ್ಕೆ ಬಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಮೀಪದ ದೇವಗಿರಿ ಹಾಗೂ ಬಂಬರಗಾ ಗ್ರಾಮಗಳ ಸರ್ಕಲ್ ನಲ್ಲಿ ಟಿಪ್ಪರ ಹಾಗೂ ಕಾರು ಅಪಘಾತಕ್ಕೀಡಾಗಿ ಹೊತ್ತಿ ಉರಿದಿದ್ದು, ಇಬ್ಬರು ಬಲಿಯಾಗಿದ್ದಾರೆ.

ಅಪಘಾತದ ರಭಸಕ್ಕೆ ಕಾರು ಹೊತ್ತಿ ಉರಿದಿದ್ದು ಬಂಬರಗಾ ಗ್ರಾಮದ 26 ವರ್ಷದ ಮೋಹನ ಮಾರುತಿ ಬೆಳಗಾಂಕರ ಹಾಗೂ ಮಚ್ಚೆ ಗ್ರಾಮದ 11 ವರ್ಷದ ಸಮೀಕ್ಷಾ ಸಾಗರ ಡೋಳೆಕರ ಕಾರಿನಲ್ಲೇ ಸಜೀವ ದಹನವಾಗಿದ್ದಾರೆ.

ಕಂಗ್ರಾಳಿ ಕೆ ಎಚ್ ಗ್ರಾಮದ ಕಡೆಯಿಂದ ಸಂಬಂಧಿಕರೊಬ್ಬರ ಮದುವೆ ಮುಗಿಸಿಕೊಂಡು ಬುಧವಾರ ರಾತ್ರಿ 10: 30ರ ಸುಮಾರಿಗೆ ಕಾರಿನಲ್ಲಿ ಬಂಬರಗಾ ಗ್ರಾಮಕ್ಕೆ ಹೋಗುತ್ತಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ಭೂತರಾಮನಹಟ್ಟಿ ಗ್ರಾಮದಿಂದ ಮಣ್ಣು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದಿದೆ.

Home add -Advt

ಈ ಸಮಯದಲ್ಲಿ ಡಿಸೇಲ್ ಟ್ಯಾಂಕ್ ಒಡೆದು ಕಾರು ಹಾಗೂ ಟಿಪ್ಪರ ಬೆಂಕಿಗಾಹುತಿ ಆಗಿವೆ. ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದು, ಉಳಿದಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಾರಿನಲ್ಲಿದ್ದ ಮಹೇಶ ಬೆಳಗಾಂವಕ ಹಾಗೂ ಸ್ನೇಹಾ ಬೆಳಗುಂದಕರ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button