*ಬೆಳಗಾವಿ ಮಹಾನಗರದಲ್ಲಿ ಕನ್ನಡ ಭಾಷೆಗೆ ಆದ್ಯತೆ: ಎಲ್ಲಾ ಮಳಿಗೆಗಳಿಗೆ ಕನ್ನಡ ನಾಮಫಲಕ ಕಡ್ಡಾಯ: ನೂತನ ಆಯುಕ್ತೆ ಶುಭ*
ಪ್ರಗತಿವಾಹಿನಿ ಸುದ್ದಿ: ಕನ್ನಡ ಭಾಷೆಯನ್ನು ಬಳಿಸಬೇಕು. ಬೆಳಗಾವಿ ಮಹಾನಗರದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಬೇಕು. ನಗರದಲ್ಲಿರುವ ಎಲ್ಲಾ ಮಳಿಗೆಗಳು ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ನೂತನ ಆಯುಕ್ತೆ ಶುಭ. ಬಿ. ಹೇಳಿದರು.
ಮಂಗಳವಾರ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನೂತನವಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಕನ್ನಡ ರಾಜ್ಯೋತ್ಸವದ 50ನೇ ವರ್ಷಕ್ಕೆ ಎಲ್ಲ ಅಧಿಕಾರಿಗಳು ಕನ್ನಡದ ಬಾವುಟದ ಬಣ್ಣದ ಐಡಿ ಹಾಕಿಕೊಳ್ಳಬೇಕೆಂದು ಸರಕಾರ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಯ ಎಲ್ಲ ಸಿಬ್ಬಂದಿಗಳಿಗೆ ಕನ್ನಡ ಬಾವುಟದ ಐಡಿ ಕಾಡ್೯ ಹಾಕಿಕೊಳ್ಳಬೇಕು ಹಾಗೂ ಬೆಳಗಾವಿ ನಗರದಲ್ಲಿರುವ ಮಳಿಗೆಗಳಲ್ಲಿ ಶೇ.60% ಕನ್ನಡ ನಾಮಫಲಕ ಅಳವಡಿಸಲೇಬೇಕು. ನಾವು ಟ್ರೇಸ್ ಲೈಸನ್ಸ್ ಕೊಡುವಾಗ ಇನ್ನೊಂದು ಬಾರಿ ಸರ್ವೆ ನಡೆಸಿ ಅನುನತಿ ನೀಡಬೇಕು. ನಾನು ಸಹ ಸ್ಥಳಕ್ಕೆ ತೆರಳಿ ಕನ್ನಡ ನಾಮಫಲಕ ಅಳವಡಿಸುವಂತೆ ಜಾಗೃತಿ ಮೂಡಿಸುವೆ ಎಂದರು.
ಪಾಲಿಕೆಯಲ್ಲಿ ತೆರಿಗೆ ಸಂಗ್ರಹದಲ್ಲಿ ಹಿಂದಿದೆ. ಬೆಳಗಾವಿ ನಗರದ ಅಭಿವೃದ್ಧಿಗೆ ತೆರಿಗೆ ವೃದ್ಧಿಯಾಗಬೇಕು. ತೆರಿಗೆ ತುಂಬದ ಜನರಿಗೆ ಕಾನೂನು ಪ್ರಕಾರ ದಂಡದ ಸಮೇತ ತುಂಬಲು ವಿಶೇಷ ತಂಡ ರಚನೆ ಮಾಡಿ ಮಾರ್ಚ ಅಂತ್ಯದವರೆಗೆ ಎಲ್ಲ ತೆರಿಗೆ ತುಂಬಿಸಿಕೊಳ್ಳಲು ಮೇಯರ್ ಗಮನಕ್ಕೆ ತಂದು ಕ್ರಮ ಜರುಗಿಸಲಾಗುವುದು ಎಂದರು.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪಾಲಿಕೆಯಿಂದ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ವಾಹನ ಸೇವೆ ಸೇರಿದಂತೆ ಇನ್ನಿತರರು ಸಹಾಯವನ್ನು ಮಾಡಲಾಗುವುದು ಎಂದರು.
ಸರಕಾರಿ ನೌಕರರಿಗೆ ಹುಟ್ಟಿರುವ ಸ್ಥಳ ಬಿಟ್ಟು ಬೇರೆ ಕಡೆ ಕೆಲಸ ಮಾಡುವುದು ಸವಾಲಿನ ಕೆಲಸವಾಗಿದೆ. ಇದು ಬಹಳ ಖುಷಿ ಕೊಡುವ ವಿಷಯ. ನಾನು ಕಳೆದ 11 ವರ್ಷದಲ್ಲಿ ಚಿತ್ರದರ್ಗ, ಮಡಿಕೇರಿ, ಮೈಸೂರು, ತುಮಕೂರು, ರಾಮನಗರ, ಕನಕಪುರದ ಕಡೆ ಕೆಲಸ ಮಾಡಿದ್ದೇನೆ. ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುವ ಸೌಭಾಗ್ಯ ಸಿಕ್ಕಿದೆ. ಬೆಳಗಾವಿ ನಗರದ ಜನರ ಸಹಕಾರ ಅತಿ ಮುಖ್ಯವಾಗಿದ ಎಂದರು.
ಬೆಳಗಾವಿಯ ಸಚಿವರು, ಸಂಸದರು, ಪಾಲಿಕೆಯ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿಗಳ ವಿಶ್ವಾಸಕ್ಕೆ ತೆಗದುಕೊಂಡು ಪಾಲಿಕೆಯನ್ನು ಅಭಿವೃದ್ಧಿ ಪಡಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಇದಕ್ಕೂ ಮುನ್ನ ಪಾಲಿಕೆಯ ಅಧಿಕಾರಿ ಸಿಬ್ಬಂದಿ ಬಳಗ, ವಿವಿಧ ಸಂಘಟನೆಯ ಮುಖಂಡರು ನೂತನ ಆಯುಕ್ತರಿಗೆ ಸ್ವಾಗತ ಕೋರಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ