Latest

*ಅತ್ತಿಗೆಯೊಂದಿಗೆ ಪತಿಯ ಅಕ್ರಮ ಸಂಬಂಧ; ಮನನೊಂದ ಪತ್ನಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಮಂಗಳೂರು: 15 ವರ್ಷಗಳ ಸ್ನೇಹ, ಪ್ರೀತಿ… ವೈವಾಹಿಕ ಜೀವನಕ್ಕೆ ಕಾಲಿಟ್ಟ ಕೇವಲ 5 ತಿಂಗಳಲ್ಲೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ.

ಕೌಶಲ್ಯ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಸುಕೇಶ್ ಹಾಗೂ ಕೌಶಲ್ಯ ಅಕ್ಕಪಕ್ಕದ ಮನೆಯವರು ಇಬ್ಬರದ್ದೂ ಹಲವು ವರ್ಷಗಳ ಪರಿಚಯ, ಸ್ನೇಹ… ಪರಸ್ಪರ ಪ್ರೀತಿಸಿ ಐದು ತಿಂಗಳ ಹಿಂದಷ್ಟೇ ಅದ್ದೂರಿಯಾಗಿ ವಿವಾಹವಾಗಿದ್ದರು. ಸುಕೇಶ್ ಆಗರ್ಭ ಶ್ರೀಮಂತ. ಪ್ರೀತಿಸಿ ವಿವಾಹವಾಗಿದ್ದ ಪತಿಯ ಅಸಲಿ ಮುಖ ಹನಿಮೂನ್ ಗೆ ಹೋದಾಗ ಪತ್ನಿಗೆ ಗೊತ್ತಾಗಿದೆ. ಪತಿಯ ಮೊಬೈಲ್ ಗೆ ಬಂದ ಆತನ ದೊಡ್ಡಪ್ಪನ ಮಗನ ಪತ್ನಿ ಅಂದರೆ ಸುಕೇಶ್ ಅತ್ತಿಗೆಯ ಮೆಸೆಜ್ ಅಕ್ರಮ ಸಂಬಂಧದ ಕಥೆ ಹೇಳಿತ್ತು.

ಪತಿಯ ಮೊಬೈಲ್ ಮೆಸೆಜ್ ಕಂಡು ಕೌಶಲ್ಯ ಶಾಕ್ ಆಗಿದ್ದಳು. ಆತನ ಮೊಬೈಲ್ ಬ್ಯಾಕ್ ಅಪ್ ತನ್ನ ಮೊಬೈಲ್ ಗೆ ಬರುವಂತೆ ಮಾಡಿದ್ದಳು. ಇದರಿಂದ ಪತಿ ಹಾಗೂ ಅತ್ತಿಗೆ ನಡುವಿನ ಸಂಭಾಷಣೆ, ಮೋಸದಾಟ ಬಯಲಾಗಿತ್ತು. ಈ ಬಗ್ಗೆ ಕೌಶಲ್ಯ ಮನೆಯಲ್ಲಿ ಹೇಳಿದ್ದಳು. ಇದರಿಂದ ಸುಕೇಶ್ ತಂದೆ ಕೌಶಲ್ಯಗೆ ನೀನು ಬಂದ ಮೇಲೆ ಸಮಸ್ಯೆ ಆರಂಭವಾಗಿದ್ದು ಎಂದು ಗಲಾಟೆ ಮಾಡಿದ್ದರು. ಇದರಿಂದ ನೊಂದ ಕೌಶಲ್ಯ ಬೇರೆ ದಾರಿಕಾಣದೇ ಫರ್ಟೈಲೈಸರ್ ಶಾಪ್ ಗೆ ಹೋಗಿ ಕಳೆನಾಶಕ ಖರೀದಿಸಿ ಸೇವಿಸಿದ್ದಳು. ಬಳಿಕ ತವರು ಮನೆಗೆ ತೆರಳಿದ್ದಳು.

ತವರು ಮನೆಗೆ ಬರುತ್ತಿದ್ದಂತೆ ತೀವ್ರ ಅಸ್ವಸ್ಥಳಾಗಿದ್ದ ಕೌಶಲ್ಯ ತಾನು ವಿಷ ಸೇವಿಸಿದ್ದಾಗಿ ಹೇಳಿದ್ದಳು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮೂರು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಏಪ್ರಿಲ್ 24ರಂದು ಕೊನೆಯುಸಿರೆಳೆದಿದ್ದಳು.

Home add -Advt

ಪತ್ನಿ ಸಾವನ್ನಪ್ಪುತ್ತಿದ್ದಂತೆ ಆರೊಪಿ ಪತಿ ಸುಕೇಶ್ ನಾಪತ್ತೆಯಾಗಿದ್ದಾನೆ. ಬೆಳ್ತಂಗಡಿ ಠಾಣೆಯಲ್ಲಿ ಸುಕೇಶ್, ಆತನ ತಂದೆ ಹಾಗೂ ಅತ್ತಿಗೆ ವಿರುದ್ಧ ಪ್ರಕರಣ ದಾಖಲಾಗಿದೆ.

https://pragati.taskdun.com/pm-narendra-modielection-campaignkartnataka/

Related Articles

Back to top button