Kannada NewsKarnataka NewsLatest

*ಫಸ್ಟ್ ನೈಟ್ ನಲ್ಲಿ ಸೆಕ್ಸ್ ಗೆ ನಿರಾಕರಿಸಿದ ಪತಿ: 2 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟ ಪತ್ನಿ*

ಪ್ರಗತಿವಾಹಿನಿ ಸುದ್ದಿ: ಮದುವೆಯಾದ ಮೊದಲ ದಿನ ರಾತ್ರಿ ಫಸ್ಟ್ ನೈಟ್ ನಲ್ಲಿ ಸೆಕ್ಸ್ ಗೆ ಪತಿ ನಿರಾಕರಿಸಿದ್ದಕ್ಕೆ ಪತ್ನಿ 2 ಕೋಟಿ ರೂಪಾಯಿ ಪರಿಹಾರಕ್ಕೆ ಬೇದಿಕೆ ಇಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಗೋವಿಂದರಾಜನಗರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪತಿ ಪ್ರವೀಣ್ ಪತ್ನಿ ವಿರುದ್ಧ ದೂರು ನೀಡುದ್ದು, ಪತ್ನಿ ತನ್ನನ್ನು ನಪುಂಸಕ ಎಂದು ಗಲಾಟೆ ಮಾಡಿದ್ದು, ಆಕೆ ಹಾಗೂ ಆಕೆಯ ಕುಟುಂಬದವರು 2 ಕೋಟಿ ರೂಪಾಯಿ ಪರಿಹಾರಕ್ಕೆ ಬೇದಿಕೆ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಪತ್ನಿಯ ಕುಟುಂಬದಾವರ ಒತ್ತಾಯದ ಮೇರೆಗೆ ಪತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪತಿ ನಪುಂಸಕನಲ್ಲ, ಸಮರ್ಥನಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

Home add -Advt


Related Articles

Back to top button