Kannada NewsKarnataka NewsLatest
*ಬೆಂಗಳೂರು-ಹುಬ್ಬಳ್ಳಿ ನಡುವೆ ಈ ರೈಲುಗಳು ರದ್ದು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಯಾಣಿಕರ ಗಮನಕ್ಕೆ… ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚರಿಸುವ ಎರಡು ರೈಲುಗಳನ್ನು ನೈಋತ್ಯ ರೈಲ್ವೆ ಇಲಾಖೆ ತಾತ್ಕಾಲಿಕವಾಗಿ ರದ್ದು ಮಾಡಿದೆ.
ಕಾರಣಾಂತರದಿಂದಾಗಿ ನವೆಂಬರ್ 20 ಹಾಗೂ ನವೆಂಬರ್ 21ರಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಬೇಕಿದ್ದ ರೆರಡು ರೈಲುಗಳನ್ನು ರದ್ದು ಮಾಡಲಾಗಿದೆ.
ರೈಲು ಸಂಖ್ಯೆ 07340 ಮತ್ತು 07339 ಕೆ ಎಸ್ ಆರ್ ಬೆಂಗಳೂರು- ಎಸ್ ಎಸ್ ಎಸ್ ಹುಬ್ಬಳ್ಳಿ ಹಾಗೂ ಕೆ ಎಸ್ ಆರ್ ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.
ಕಳಪೆ ಆಕ್ಯುಪೆನ್ಸಿ ಕಾರಣಕ್ಕಾಗಿ ಈ ರೈಲುಗಳು ರದ್ದಾಗಿದ್ದು, ಮುಂದಿನ ಸುತ್ತೋಲೆ ಹೊರಡಿಸುವವರೆಗೂ ರೈಲು ಸಂಚಾರ ಇರುವುದಿಲ್ಲ ಎಂದು ತಿಳಿಸಿದೆ.




