Latest

*ಸತತ ಎರಡು ಗಂಟೆ ಸುರಿದ ಮಳೆಗೆ ಬೆಂಗಳೂರು ತತ್ತರ* *ಮತ್ತೆ ಮಳೆ ಮುನ್ಸೂಚನೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ 4:30 ರಿಂದ ಸುರಿದ ಭಾರಿ ಮಳೆಗೆ ಅಲಹವಾರು ಅವಾಂತರ ಸೃಷ್ಟಿಯಾಗಿದೆ. 

ಬೆಂಗಳೂರಿನಲ್ಲಿ ಬೆಳಗಿನ ಜಾವ 4.30 ಸುಮಾರಿಗೆ ಶುರುವಾದ ಮಳೆ, 6:30ವರೆಗೆ ಸಾಧಾರಣವಾಗಿ ಸುರಿದಿದೆ. ರಾಜರಾಜೇಶ್ವರಿ ನಗರ, ಎಚ್ ಎಸ್ ಆರ್ ಲೇಔಟ್, ಚಾಮರಾಜಪೇಟೆ, ಎಚ್ ಎಎಲ್, ಮೆಜೆಸ್ಟಿಕ್ ಮುಂತಾದ ಕಡೆಗಳಲ್ಲಿ ಮಳೆ ಆಗಿದೆ.‌ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿ ರಸ್ತೆಗಳು ಜಲಾವೃತವಾಗಿದೆ. ಇನ್ನು ಮಧ್ಯಾಹ್ನ 2 ಗಂಟೆಯ ನಂತರ ಬೆಂಗಳೂರಿನ ನಾನಾ ಪ್ರಾಂತ್ಯಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ವರುಣನ ಆರ್ಭಟಕ್ಕೆ ಹೆಬ್ಬಾಳ ಫೈಓವರ್ ಮೇಲೆ ನೀರು ನಿಂತಿದ್ದು ವಾಹನ ಸವಾರರು ನಿಧಾನವಾಗಿ ಸಾಗಬೇಕೆಂದು ಬೆಂಗಳೂರು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Home add -Advt

Related Articles

Back to top button