Belagavi NewsBelgaum NewsKannada NewsKarnataka NewsNationalPolitics

*ತಿರಂಗಾ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಅನಿಲ ಬೆನಕೆ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ : ಭಾರತೀಯ ಜನತಾ ಪಕ್ಷ ಬೆಳಗಾವಿ ಉತ್ತರ ಯುವ ಮೋರ್ಚಾ ವತಿಯಿಂದ ತಿರಂಗಾ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ ಅನಿಲ ಬೆನಕೆ ಅವರು ಬೈಕ್ ರ್ಯಾಲಿಗೆ ಚಾಲನೆ ನೀಡಿದರು.‌

ಬೈಕ್ ರ್ಯಾಲಿಗೆ ಇಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನೀಲ ಬೆನಕೆ ಅವರು  ಚಾಲನೆ ನೀಡಿದರು. ಕನ್ನಡ ಸಾಹಿತ್ಯ ಭವನದಲ್ಲಿ ಆರಂಭವಾದ ಬೈಕ್ ರ್ಯಾಲಿಯು ಚನ್ನಮ್ಮ ವೃತದ ಗಣೇಶ ದೇವಸ್ಥಾನ, ಕಾಕತಿವೇಸ್ ರೋಡ್, ಗಣಪತ ಗಲ್ಲಿ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಮಾರ್ಗದಿಂದ ಸಾಗಿ ಧರ್ಮಿವೀರ ಸಂಭಾಜಿ ವೃತ್ತದಲ್ಲಿ ಅಂತ್ಯವಾಯಿತಿ.

Home add -Advt

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಡಾ. ರವಿ ಪಾಟೀಲ್ ಅವರು, ಇಂದು ನೂರಕ್ಕೂ ಹೆಚ್ಚು ಬೈಕ್ ಗಳ ಮೂಲಕ ಬೆಳಗಾವಿ ನಗರದಲ್ಲಿ ತಿರಂಗಾ ಬೈಕ್ ಯಾತ್ರೆ ಮಾಡುತ್ತಿದ್ದೇವೆ.‌ ಬೈಕ್ ರ್ಯಾಲಿಯ ಉದ್ದೇಶ ಭಾರತದಲ್ಲಿ ಏಕತೆ ತರುವುದು ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸುವದಾಗಿದೆ ಎಂದು ತಿಳಿಸಿದರು.‌

ಬಳಿಕ ಮಾತನಾಡಿದ ಅನಿಲ ಬೆನಕೆ ಅವರು, ಇಡೀ ದೇಶದಲ್ಲಿ ತಿರಂಗಾ ಯಾತ್ರೆ ನಡೆಯುವ ರೀತಿಯಲ್ಲಿ ಬೆಳಗಾವಿಯಲ್ಲಿ ನಡೆಯುತ್ತಿದೆ.‌ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ಹಾಗೆ ತಮ್ಮ ತಮ್ಮ ಮನೆಯ ಮೇಲೆ ಎಲ್ಲರೂ ತಿರಂಗಾ ಹಾರಿಸಬೇಕು ಎಂದು ಮನವಿ ಮಾಡಿದರು. 

Related Articles

Back to top button