Kannada NewsKarnataka NewsLatest

*ಅಪ್ರಾಪ್ತನಿಗೆ ಮದ್ಯ ಕುಡಿಸಿದ ಸಂಸ್ಥೆ: 7ನೇ ಮಹಡಿಯಿಂದ ಬಿದ್ದು ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಬಾಲಕನಿಗೆ ಸಂಸ್ಥೆಯೊಂದು ಮದ್ಯ ಕುಡಿಸಿದ್ದು, ಮದ್ಯದ ಅಮಲಿನಲ್ಲಿ ಬಾಲಕ ೭ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರಿನಲ್ಲಿ ಸಂಸ್ಥೆಯೊಂದು 15 ವರ್ಷದ ಬಾಲಕನಿಗೆ ಮದ್ಯ ಕುಡಿಸಿರುವ ಆರೋಪ ಕೇಳಿಬಂದಿದೆ. ಆತ ಅಪಾರ್ಟ್ ಮೆಂಟ್ ನ 7ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಬೆಂಗಳೂರಿನ ಆರ್.ಆರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.

ಜನವರಿಯಲ್ಲಿ ನಡೆದಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡಾ.ವಿಷ್ಣುವರ್ಧನ್ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಬಾಲಕನ ಪೋಷಕರು ಅಂದೇ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರಿಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಸ್ಥಳೀಯ ಸಂಸ್ಥೆ ೧೫ ವರ್ಷದ ಬಾಲಕನಿಗೆ ಸಿಗರ‍ೆತ್ ಹಾಗೂ ಮದ್ಯ ನೀಡಿದೆ. ಬಾಲಕ ತನ್ನ ಸ್ನೇಹಿತರ ಜೊತೆ ಸೇರಿ ಮದ್ಯಪಾನ ಮಾಡಿ ಅಪಾರ್ಟ್ ಮೆಂತ್ ನಿಂದ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ಮಾಲೀಕ ಹಾಗೂ ಸಿಬ್ಬಂದಿ ವಿರುದ್ಧ ಜೆಜೆ ಆಕ್ಟ್ ಅಡಿ ಕೇಸ್ ದಾಖಲಾಗಿದೆ.

Home add -Advt

Related Articles

Back to top button